Site icon Suddi Belthangady

ಸಿಎ ಪರೀಕ್ಷೆಯಲ್ಲಿ ಮುಂಡಾಜೆಯ ಅಶ್ವಥ್ ಎಸ್ ಉತ್ತೀರ್ಣ

ಬೆಳ್ತಂಗಡಿ: ಅಖಿಲ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ 2024 ಇದರ ವತಿಯಿಂದ ಮೇ ತಿಂಗಳಿನಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಮುಂಡಾಜೆಯ ದಿ.‌ಶಿವರಾಮ ಗೊಲ್ಲ ಮತ್ತು ಭಾಗೀರಥಿ ದಂಪತಿ ಪುತ್ರ ಅಶ್ವಥ್ ಎಸ್ ಅವರು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.

ಇವರು ಮಂಗಳೂರಿನ ಪ್ರಖ್ಯಾತ ಸಿ.ಎ ಗಣೇಶ್ ರಾವ್ ಪಿ ಕದ್ರಿ ಅವರ ಜೊತೆ ತರಬೇತಿ ಪಡೆದು ಪರೀಕ್ಷೆ ಎದುರಿಸಿ ಯಶಸ್ಸು ಸಾಧಿಸಿದ್ದಾರೆ. ಆರ್ಟಿಕಲ್‌ಶಿಪ್ ಅನ್ನೂ ಅಲ್ಲೇ ಪೂರೈಸಿದ್ದಾರೆ.ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಂಡಾಜೆ ಸರಸ್ವತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ, ಪ್ರೌಢ ಮತ್ತು ಪ.ಪೂ ಶಿಕ್ಷಣವನ್ನು ಎಸ್‌ಡಿಎಂ ಹೈಸ್ಕೂಲ್ ಮತ್ತು ಕಾಲೇಜು ಉಜಿರೆಯಲ್ಲಿ ಹಾಗೂ ಬಿ.ಕಾಂ ಪದವಿಯನ್ನು ಕೆನರಾ ಕಾಲೇಜು ಮಂಗಳೂರು ಇಲ್ಲಿ ಪೂರೈಸಿರುತ್ತಾರೆ.

ಅತ್ಯುತ್ತಮ ಕ್ರೀಡಾಪಟು ಕೂಡ ಆಗಿರುವ ಅವರು ಶೆಟ್ಲ್ ಬ್ಯಾಡ್ಮಿಂಟನ್ ನಲ್ಲಿ ರಾಜ್ಯ ಮಟ್ಟದ ವರೆಗೆ, ಹಾಗೂ ಕ್ರಿಕೆಟ್ ನಲ್ಲಿ ಮಂಗಳೂರು ಯುನಿವರ್ಸಿಟಿಯನ್ನು ಪ್ರತಿನಿಧಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.ಅವರ ತಾಯಿ ಭಾಗೀರಥಿ ಅವರು ಲ್ಯಾಂಪ್ ಸೊಸೈಟಿಯಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದು, ಸಹೋದರಿ ನಿಟ್ಟೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಪ್ರಸ್ತುತ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

Exit mobile version