ತೋಟತ್ತಾಡಿ: ಬೆಂದ್ರಾಳ ಸಂತ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ರ ಶಾಲಾ ಸಂಸತ್ ರಚಿಸಲಾಯಿತು. ಇವಿಎಂ ಯಂತ್ರದ ಮೂಲಕ ವಿದ್ಯಾರ್ಥಿಗಳು ಮತವನ್ನು ಹಾಕಿದರು.
ನಂತರ ವಿದ್ಯಾರ್ಥಿ ಮತದಾರರ ಎದುರೆ ಮತ ಲೆಕ್ಕದ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಿತು.ಶಾಲಾ ವಿದ್ಯಾರ್ಥಿ ನಾಯಕನಾಗಿ ಆಶಿನ್ ಲೈಜು 9ನೇ ಆಯ್ಕೆಯಾದರು.
ಉಪನಾಯಕಿಯಾಗಿ ಧನುಶ್ರೀ 9ನೇ, ಕ್ರೀಡಾ ಮಂತ್ರಿಯಾಗಿ ಪ್ರಜ್ವಲ್ ಮತ್ತು ಉಪಕ್ರೀಡಾ ಮಂತ್ರಿಯಾಗಿ ಗ್ರಿಫಿನ್ ಮೈಕಲ್ ತೋಮಸ್ 10ನೇ, ಸಾಂಸ್ಕೃತಿಕ ಮಂತ್ರಿಯಾಗಿ ದೀಕ್ಷಿತ್ ಮತ್ತು ಉಪ ಸಾಂಸ್ಕೃತಿಕ ಮಂತ್ರಿಯಾಗಿ ಆಲ್ಫಿಯ 9ನೇ, ಸ್ವಚ್ಛತೆ ಮತ್ತು ಆರೋಗ್ಯ ಮಂತ್ರಿಯಾಗಿ ಜೀವನ್ ಪಿ.ಎಸ್ ಮತ್ತು ಉಪ ಸ್ವಚ್ಛತೆ ಮತ್ತು ಆರೋಗ್ಯ ಮಂತ್ರಿಯಾಗಿ ಅಶ್ವಿತ ಕೆ.ಪಿ 9ನೇ, ಶಿಸ್ತು ಪಾಲನ ಮಂತ್ರಿಯಾಗಿ ಧನ್ಯಶ್ರೀ ಮತ್ತು ಉಪಶಿಸ್ತುಪಾಲನ ಮಂತ್ರಿಯಾಗಿ ಜೆಸ್ವಿನ್ ಜೋಸೆಫ್ 9ನೇ, ನೋಟೀಸ್ ಬೋರ್ಡ್ ನಾಯಕನಾಗಿ ಧನುಷ್ ಮತ್ತು ಉಪ ನೋಟಿಸ್ ಬೋರ್ಡ್ ಮಂತ್ರಿಯಾಗಿ ಜಿಸ್ವಿನ್ ಜೋಸೆಫ್ 9ನೇ ಆಯ್ಕೆಯಾದರು.
ಬೆಥನಿ ಐಟಿಐ ಕಾಲೇಜು ನೆಲ್ಯಾಡಿ ಇಲ್ಲಿನ ಪ್ರಾಂಶುಪಾಲ ಸುನಿಲ್ ಮತ್ತು ಐಟಿಐ ವಿದ್ಯಾರ್ಥಿಗಳು ಚುನಾವಣೆಯನ್ನು ಪ್ರಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ ನೆರೆವೇರಿಸಿಕೊಟ್ಟರು.