Site icon Suddi Belthangady

ಧರ್ಮಸ್ಥಳ: ಶ್ರೀ ಮಂ.ಸ್ವಾ.ಅ.ಹಿ. ಪ್ರಾಥಮಿಕ ಶಾಲೆಯ ಏಳನೇ ತರಗತಿಯ ಮಕ್ಕಳಿಗೆ ಭತ್ತದ ನಾಟಿಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಧರ್ಮಸ್ಥಳ: ‘ಕೃಷಿ ತೋ ನಾಸ್ತಿ ದುರ್ಭಿಕ್ಷಂ’ ಎಂಬ ಮಾತಿನಂತೆ ಇಂದು ಆಧುನಿಕತೆಯ ಹೊಸ್ತಿಲಿನಲ್ಲಿರುವ ಮಕ್ಕಳಿಗೆ ಶಾಲೆಯನ್ನು ಹೊರತುಪಡಿಸಿ ವ್ಯಕ್ತಿತ್ವದ ಬೆಳವಣಿಗೆಯೊಂದಿಗೆ ಜೀವನಪಾಠವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ಮಕ್ಕಳಿಗೆ ಭತ್ತದ ನಾಟಿಯ ಪ್ರಾತ್ಯಕ್ಷಿಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶರಾವತಿ ವಸತಿ ಗೃಹದ ಪಕ್ಕದಲ್ಲಿರುವ ಬಾಳೆ ನೆಡುವ ನಾಗನ ಗದ್ದೆಯಲ್ಲಿ ಜು.10ರಂದು ನಡೆಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ.ವಿ ಹೆಗ್ಗಡೆಯವರು ವಿದ್ಯಾರ್ಥಿಗಳೊಂದಿಗೆ ಭತ್ತದ ನಾಟಿಯ ಅವಶ್ಯಕತೆ, ಉಪಯೋಗಗಳ ಕುರಿತು ಸಂವಾದ ನಡೆಸಿ ಸಲಹೆಗಳನ್ನು ನೀಡಿದರು.

ಕಾಮಗಾರಿ ವಿಭಾಗದ ಮುಖ್ಯಸ್ಥ ರಾಜೇಂದ್ರ ರೈಯವರ ಮಾರ್ಗದರ್ಶನದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳು ರೈತರೊಂದಿಗೆ ಭತ್ತದ ನಾಟಿಯ ಹೊಸ ಅನುಭವವನ್ನು ಪಡೆದುಕೊಂಡು ಅನ್ನ ಹಾಗೂ ಅನ್ನದಾತನ ಮಹತ್ವವನ್ನು ಅರಿತುಕೊಂಡರು.

ಶಾಲಾ ಮುಖ್ಯೋಪಾಧ್ಯಾಯ ಕಮಲ್ ತೇಜ್ ರಜಪೂತ್ ಹಾಗೂ ಶಿಕ್ಷಕ ವೃಂದದವರು ಈ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದರು.

Exit mobile version