Site icon Suddi Belthangady

ಪದ್ಮುಂಜ: ಸ.ಹಿ.ಪ್ರಾ ಶಾಲೆಯಲ್ಲಿ ಪೋಷಕರ ಸಭೆ- ಉಪ್ಪಿನಂಗಡಿ ಪೋಲೀಸರಿಂದ ಪೋಕ್ಸೋ ಕಾಯಿದೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ

ಪದ್ಮುಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪದ್ಮುಂಜದಲ್ಲಿ ಪೋಷಕರ ಸಭೆ ಹಾಗೂ ಉಪ್ಪಿನಂಗಡಿ ಪೋಲೀಸರಿಂದ ಪೋಕ್ಸೋ ಕಾಯಿದೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಜು.8ರಂದು ಸಮಿತಿಯ ಅಧ್ಯಕ್ಷ ಪುರುಷೋತ್ತಮ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಉಪ್ಪಿನಂಗಡಿ ಪೊಲೀಸರಾದ ಎ ಎಸ್ ಐ ಕವಿತಾ ಹಾಗೂ ಬೀಟ್ ಪೋಲೀಸ್ ರೇಣುಕಾ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಕೆಲವೊಂದು ಪ್ರಕರಣಗಳು ಬೆಳಕಿಗೆ ಬಂದರೆ ಇನ್ನು ಕೆಲವು ಪ್ರಕರಣಗಳು ಬೇರೆ ಬೇರೆ ರೀತಿಯಲ್ಲಿ ಬೆಳಕಿಗೆ ಬಾರದೆ ಮುಚ್ಚಿಡುವುದು ಕಂಡು ಬರುತ್ತದೆ.

ಯಾರಿಗಾದರೂ ಇಂತಹ ಘಟನೆ ಸಂಭವಿಸಿದಲ್ಲಿ ಕೂಡಲೇ ಸಂಬಂಧಪಟ್ಟ ಪೋಲೀಸ್ ಇಲಾಖೆಗೆ ಅಥವಾ ಅಂಗನವಾಡಿ ಆಶಾ ಕಾರ್ಯಕರ್ತೆಯರ ಗಮನಕ್ಕೆ ಮಾಹಿತಿ ನೀಡಿ ನಾವು ಪೋಲೀಸ್ ಇಲಾಖೆ ದೌರ್ಜನ್ಯ ಕ್ಕೊಳಗಾದ ಹೆಣ್ಣು ಮಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ ಆರೋಪಿಗಳನ್ನು ಪೋಸ್ಕೋ ಕಾಯಿದೆಯಡಿ ಬಂಧಿಸಿ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದರು.

ಆಶಾ ಕಾರ್ಯಕರ್ತೆ ಶಾಲಿನಿ ಯವರು ಮಾತನಾಡಿ ಸ್ವಚ್ಚತೆಯ ಕೊರತೆಯಿಂದ ಹಾಗೂ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಮಳೇರಿಯಾ ಕಾಲರಾದಂತಹಾ ರೋಗಿಗಳಿಗೆ ಕಾರಣವಾಗುತ್ತದೆ ಆದುದರಿಂದ ನಮ್ಮ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ ಸ್ವಚ್ಚತೆಯ ಬಗ್ಗೆ ಗಮನಹರಿಸಿ ಎಂದರು ಮುಖ್ಯ ಶಿಕ್ಷಕಿ ಕೀರ್ತಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾಭಿವೃದ್ಧಿಯ ಬಗ್ಗೆ ಪೋಷಕರ ಸಹಕಾರ ಕೇಳಿದರು.

ಸದಾಶಿವ ಶೆಟ್ಟಿ ಯವರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನಡೆಸಿದರು.ಶಿಕ್ಷಕಿ ಕಾವ್ಯ ರವರು ಬಹುಮಾನ ವಿತರಣೆ ನಡೆಸಿಕೊಟ್ಟರು. ಅಧ್ಯಾಪಕಿ ತೇಜಾರವರು ಸ್ವಾಗತಿಸಿದರು ಶಿಕ್ಷಕಿ ನಳಿನಿ ಯವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಕೀರ್ತಿ ಯವರು ಧನ್ಯವಾದ ಸಲ್ಲಿಸಿದರು.

Exit mobile version