ಬೆಳ್ತಂಗಡಿ: ಸಾಮಾಜಿಕ ವ್ಯವಸ್ಥೆಯಲ್ಲಿನ ಮೌಢ್ಯ ಹಾಗೂ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಸಾಂವಿಧಾನಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿರವರಿಂದ ಸ್ಥಾಪಿತವಾದ ಮಾನವ ಬಂಧುತ್ವ ವೇದಿಕೆಯ ರಾಜ್ಯಮಟ್ಟದ ತರಭೇತಿ ಕಾರ್ಯಾಗಾರವು ದಾವಣಗೆರೆ ಜಿಲ್ಲೆಯ ಹರಿಹರದ ಮೈತ್ರಿವನದಲ್ಲಿ ಜರುಗಿತು.
ತರಭೇತುದಾರರಾಗಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರು,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರೊ.ಎ ಬಿ ರಾಮಚಂದ್ರಪ್ಪ,ಪೂರ್ವಾಧ್ಯಕ್ಷರಾದ ರವಿ ನಾಯ್ಕರ್,ವಿವಿಧ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳು ಮಾಹಿತಿ ನೀಡಿದರು.
ತರಭೇತಿ ಕಾರ್ಯಾಗಾರದಲ್ಲಿ ಮಾನವ ಬಂಧುತ್ವ ವೇದಿಕೆ ಬೆಳ್ತಂಗಡಿ ತಾಲೂಕು ಘಟಕದಿಂದ ಪ್ರಗತಿಪರ ಚಿಂತಕ, ಸಂಘಟಕರಾದ ಸಂದೀಪ್ ಎಸ್ ನೀರಲ್ಕೆ ಭಾಗಿಯಾದರು.