ಬೆಳ್ತಂಗಡಿ: ಪಶ್ಚಿಮ ವಲಯ ಐಜಿಪಿ ಪೊಲೀಸ್ ಇಲಾಖೆಯ 24 ಸಬ್ ಇನ್ಸ್ ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಜು.10ರಂದು ಆದೇಶಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಳೆದ 1 ವರ್ಷ 11 ತಿಂಗಳು ಕರ್ತವ್ಯ ನಿರ್ವಹಿಸಿದ್ದ ಸಬ್ ಇನ್ಸ್ ಪೆಕ್ಟರ್-1 ಅನಿಲ್ ಕುಮಾರ್ ಡಿ ಅವರನ್ನು ಮಂಗಳೂರು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್-1 ಕಿಶೋರ್.ಪಿ ಅವರನ್ನು ನೇಮಕ ಮಾಡಲಾಗಿದೆ