ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ ಶ್ರೀ ಗುರು ಸಾನಿಧ್ಯ ಲೋಕಾರ್ಪಣೆ ಮತ್ತು ಆಡಳಿತ ಕಚೇರಿಯ ಉದ್ಘಾಟನೆ ಜು. 13 ರಂದು ನಡೆಯಲಿದೆ. ಎಂದು ಸಂಘದ ಅಧ್ಯಕ್ಷಎನ್. ಪದ್ಮನಾಭಾ ಮಾಣಿ0ಜ ಮತ್ತು ಉಪಾಧ್ಯಕ್ಷ ಭಗೀರಥ ಜಿ. ಹೇಳಿದರು.
ಅವರು ಜು. 9ರಂದು ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು 2007-08 ರಲ್ಲಿ ಪ್ರಾರಂಭಗೊಂಡು ಕಳೆದ ಸುದೀರ್ಘ 16 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡಿಕೊಂಡ ಸಂಸ್ಥೆಯ ಧೈಯೋದ್ದೇಶಗಳನ್ನು ಈಡೇರಿಸುವ ಮುಖೇನ ಒಂದೊಂದು ಹೆಜ್ಜೆ ಮೇಲೆರುತ್ತ ಮುಂದಡಿ ಇಡುತ್ತಿದೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸಿ ಆ ಮೂಲಕ ಆರ್ಥಿಕವಾಗಿ ಶಕ್ತರನ್ನಾಗಿ ಮಾಡುವ ಸದುದ್ದೇಶದಿಂದ ಮಾಜಿ ಶಾಸಕ ದಿ.ಕೆ ವಸಂತ ಬಂಗೇರರವರು ಮುಖ್ಯಪ್ರವರ್ತಕರಾಗಿ, ಹಿರಿಯ ಸಹಕಾರಿಗಳಾದ ದಿ. ಕೆ.ಜಿ.ಬಂಗೇರರ ಸ್ಥಾಪಕಾಧ್ಯಕ್ಷತೆಯಲ್ಲಿ ಪ್ರಾರಂಭಗೊಂಡು ಸಹಕಾರ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ಮೈಸೂರು ಪ್ರಾಂತ್ಯದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು ಪ್ರಸ್ತುತ 22 ಶಾಖೆಗಳನ್ನು ಹೊಂದಿದ್ದು, 2024-25ನೇ ಸಾಲಿನಲ್ಲಿ ಒಟ್ಟು 3 ಶಾಖೆಗಳು ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಕೋರ್ ಬ್ಯಾಂಕಿಂಗ್ ಮೂಲಕ ನೇರವಾಗಿ ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಪ್ರಸ್ತುತ 82 ಮಂದಿ ಸಿಬ್ಬಂದಿಗಳಿದ್ದು ಸುಮಾರು 42000 ಕ್ಕೂ ಮಿಕ್ಕಿ ಸದಸ್ಯತನವನ್ನು ಹೊಂದಿದ್ದು, ರೂ.193 ಕೋಟಿ ಠೇವಣಿಯನ್ನು ಸಂಗ್ರಹಿಸಿ, ರೂ.167 ಕೋಟಿ ಸಾಲವನ್ನು ವಿತರಿಸಿ, 212 ಕೋಟಿ ದುಡಿಯುವ ಬಂಡವಾಳದೊಂದಿಗೆ, ಕಳೆದ ವರ್ಷದಲ್ಲಿ 1120 ಕೋಟಿ ವ್ಯವಹಾರ ನಡೆಸಿ, ರೂ.3.84 ಕೋಟಿ ನಿವ್ವಳ ಲಾಭಗಳಿಸಿ ಸದಸ್ಯರಿಗೆ ನಿರಂತರ ಶೇ.15ರಷ್ಟು ಲಾಭಂಶ ನೀಡುತ್ತಿರುವ ‘ಎ’ ಶ್ರೇಣಿಯ ಸಂಘವಾಗಿರುತ್ತದೆ.
ಸಂಸ್ಥೆಯು ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರಿಯವಾಗಿರುತ್ತದೆ. ‘ಕಲಿಕೆಗಾಗಿ ಸಹಾಯ ಸಹಾಯಕ್ಕಾಗಿ ಕಲಿಕೆ” ಎನ್ನುವ ನಮ್ಮ ಸಂಸ್ಥೆಯ ಯೋಜನೆಯಡಿ ದತ್ತು ಸ್ವೀಕಾರ ಕಾರ್ಯಕ್ರಮದಡಿಯಲ್ಲಿ 3 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ಖರ್ಚುವೆಚ್ಚ ಭರಿಸಲಾಗಿದ್ದು ಪ್ರಸ್ತುತ ಉತ್ತಮ ಉದ್ಯೋಗ ಲಭಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿರುವುದು ಸಂಸ್ಥೆಯು ಕಂಡ ಕನಸು ನನಸಾಗಿದೆ. ಒಬ್ಬರು ಮೆಡಿಕಲ್ ವಿದ್ಯಾರ್ಥಿಯ ವ್ಯಾಸಂಗದ ಆಂಶಿಕ ವೆಚ್ಚ ಹಾಗೂ ಶ್ರೀ ಗುರುದೇವ ಕಾಲೇಜಿನ ಪದವಿ ವ್ಯಾಸಂಗ ಮಾಡುತ್ತಿರುವ 111 ಪದವಿ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಪ್ರತಿ ವರ್ಷ 6 ರಿಂದ 7 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಎಸ್.ಎಸ್.ಎಲ್.ಸಿ. ಪಿಯುಸಿ ಮತ್ತು ಪದವಿಯಲ್ಲಿ ಹಾಗೂ ಇತರ ಕ್ಷೇತ್ರದಲ್ಲಿ ಅತೀ ಹೆಚ್ಚು ಸಾಧನೆ ಮಾಡಿದ ಸಂಸ್ಥೆಯ ಸದಸ್ಯರ ಮಕ್ಕಳನ್ನು ಗುರುತಿಸಿ ಪ್ರತಿವರ್ಷ ಮಹಾಸಭೆಯಲ್ಲಿ ಸನ್ಮಾನಿಸಲಾಗಿರುತ್ತದೆ. ಹಾಗೂ ನಿರ್ದೇಶಕರ ಸಭಾಭತ್ತೆಯನ್ನು ಪ್ರತಿವರ್ಷ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಾಗುತ್ತಿದೆ.
ಪ್ರಾಕೃತಿಕ ದುರಂತ ಸಂಭವಿಸಿದಾಗ ಸಂಘದ ವತಿಯಿಂದ ರೂ.3.00 ಲಕ್ಷಕ್ಕೂ ಹೆಚ್ಚು ಪರಿಹಾರ ನಿಧಿ, ಕೋವಿಡ್-19 ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ.50,000/- ಪರಿಹಾರ ನಿಧಿ, ಕೋವಿಡ್ -19 ನಿರ್ವಹಣೆಗಾಗಿ ತಾಲೂಕು ಮತ್ತು ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೂ.1.00 ಲಕ್ಷ ಮೊತ್ತದ ಕೋವಿಡ್ ನಿರ್ವಹಣಾ ಸಾಮಾಗ್ರಿಗಳಿಗೆ ವಿತರಿಸಲಾಗಿದೆ.
ಸಂಘದ ಸಾಧನೆಯ ಪೂರಕವಾಗಿ 2023ರಲ್ಲಿ ಜಿಲ್ಲೆರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯದ ಉತ್ತಮ ಸಹಕಾರ ಸಂಘ ಪ್ರಶಸ್ತಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ 8 ವರ್ಷಗಳಿಂದ ಸಾಧನಾ ಪ್ರಶಸ್ತಿ,ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಮತ್ತು ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಸಾಧನ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿದೆ.
ಸಂಘದ ಸಾಲಗಾರ ಸದಸ್ಯರು ಮರಣ ಹೊಂದಿದರೆ ಅಥವಾ ಶಾಶ್ವತ ವಿಕಲ ಚೇತನರಾದರೆ ರೂ. 5 ಲಕ್ಷ ಮರಣ ನಿಧಿ, ಒಟ್ಟು 33 ಫಲಾನುಭವಿಗಳಿಗೆ ರೂ.21,15,634/- ಮರಣ ನಿಧಿಯಿಂದ ಸಾಲದ ಮೊತ್ತ ಭರಿಸಿ ಮೃತ ಸಾಲಗಾರರ ಕುಟುಂಬವನ್ನು ಸಂಪೂರ್ಣ ಸಾಲದಿಂದ ಯಣಮುಕ್ತಗೊಳಿಸಲಾಗಿದೆ.
ನೂತನ ಕೇಂದ್ರ ಕಛೇರಿಯು ಸುಮಾರು ರೂ.5.25 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿಧಿಯಿಂದ ಭರಿಸಿಕೊಂಡು ಒಟ್ಟು 11100 ಚದರ ಅಡಿ ವಿಸ್ತೀರ್ಣವುಳ್ಳ 3 ಮಹಡಿಗಳನ್ನು ಹೊಂದಿರುವ ಗುರುಸಾನಿಧ್ಯ ಎಂಬ ನಾಮಾಂಕಿತವುಳ್ಳ ಕೇಂದ್ರ ಕಛೇರಿಯು ಲೋಕರ್ಪಾಣೆಯಾಗಲಿದೆ ಇದರಲ್ಲಿ ನೆಲ ಮಹಡಿಯಲ್ಲಿ ಸಂಘಕ್ಕೆ ಬರುವ ಹೊಂದಿದ್ದು, ಕೆಳಮಹಡಿ ಮತ್ತು ಪ್ರಥಮ ಮಹಡಿಯು ವಾಣಿಜ್ಯ ಕಾದ್ದೇಶಕ್ಕೆ ಮಹಡಿಯಲ್ಲಿ ಸುಸಜ್ಜಿತವಾದ ಆಡಳಿತ ಕಚೇರಿಯನ್ನು ಹೊಂದಿದ್ದು ಮತ್ತು 3ನೇ ಸಾಮಾರ್ಥ್ಯ ಹೊಂದಿರುವ ಶ್ರೀ ಗುರುಸಾನಿಧ್ಯ ಸಭಾಂಗಣವನ್ನು ಹೊಂದಿರುತ್ತದೆ. ಕಿಲೋವ್ಯಾಟ್ ಸಾಮಾರ್ಥ್ಯದ ಸೋಲಾರ್ ಅಳವಡಿಕೆ ಮಾಡಲಾಗಿರುತ್ತದೆ. 2ನೇ ಮಹಡಿಯು ಸುಮಾರು 300 ರಷ್ಟು ಸಂಖ್ಯೆಯ ಗ್ರಾಹಕರ ಅನುಕೂಲಕ್ಕಾಗಿ ಲಿಪ್ಟ್ ಸೌಲಭ್ಯ, 60 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಅಳವಡಿಕೆ ಮಾಡಲಾಗಿರುತ್ತದೆ.
ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜರವರು ವಹಿಸಲಿದ್ದು, ಆಡಳಿತ ಕಚೇರಿ ಉದ್ಘಾಟನೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಹಕಾರ ಸಚಿವರು ಭದ್ರತೆ ಕೊಠಡಿ ಉದ್ಘಾಟನೆಯನ್ನು ಉಸ್ತುವರಿ ಸಚಿವ ದಿನೇಶ್ ಗುಂಡೂರಾವ್, ಸಭಾಭವನದ ಉದ್ಘಾಟನೆಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಹಕಾರಿ ಆ್ಯಪ್ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಮೂಲ್ಕಿ-ಮೂಡಬಿದಿರೆ ವಿಧಾನಸಭೆ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಮತ್ತು ಮುಖ್ಯ ಅತಿಥಿಗಳಾಗಿ ಹಾಗೂ ವಿಶೇಷ ಆಹ್ವಾನಿತರಾಗಿ ಹಲವು ಮಂದಿ ಗಣ್ಯರಾ ಭಾಗವಹಿಸಲಿದ್ದಾರೆ ಎಂದರು
ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕರುಗಳಾದ ಸುಜಿತಾ ವಿ ಬಂಗೇರ , ತನುಜಾ ಶೇಖರ್, ಸಂಜೀವ ಪ್ರಜಾರಿ, ಕೆ.ಪ್ರಿ.ದಿವಾಕರ, ಜಗದೀಶ್ಚಂದ್ರ
ಡಿ.ಕೆ.,ಚಂದ್ರಶೇಖರ, ಧರಣೇಂದ್ರ ಕುಮಾರ್ ಪಿ, ಗಂಗಾಧರ ಮಿತ್ತಮಾರು, ಆನಂದ ಪೂಜಾರಿ, ಡಾ. ರಾಜಾರಾಮ ಕೆ. ಬಿ., ಜಯವಿಕ್ರಮ್, ಸಂಘದ ವಿಶೇಷಾಧಿಕಾರಿ ಎಂ.ಮೋನಪ್ಪ
ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್ ಉಪಸ್ಥಿತರಿದ್ದರು.