ಬೆಳ್ತಂಗಡಿ: ಗ್ಲೋಬಲ್ ಕ್ಯಾಥೋಲಿಕ್ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ಆಯ್ಕೆಯಾದ ಜೈಸನ್ ಪಟ್ಟೇರಿಲ್ ಅವರಿಗೆ ಉಜಿರೆ ಕೆ.ಎಸ್.ಎಂ.ಸಿ.ಎ ಘಟಕದಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉಜಿರೆ ಚರ್ಚಿನ ಧರ್ಮಗುರುಗಳು ಫಾಧರ್ ಮ್ಯಾಥ್ಯೂ ಅಂಬಾಟ್ ಶಾಲನ್ನು ಹೊದಿಸಿ ಸನ್ಮಾನಿಸಲಾಯಿತು.
ಧರ್ಮಸ್ಥಳ ಕೆ.ಎಸ್.ಎಂ.ಸಿ.ಎ ಕಾರ್ಯದರ್ಶಿ ಜೇಮ್ಸ್ ನೆಲ್ಲಿಕುನ್ನೆಲ್ ಉಜಿರೆ, ಕೆ.ಎಸ್.ಎಂ.ಸಿ.ಎ ಘಟಕ ಅಧ್ಯಕ್ಷ ಜೋಬಿ ಮುಳವನ, ಡ್ಯಾನಿಶ್ ಕೊಳಪುರಾತ್, ಸನ್ನಿ ಬೆಳಲು ರಿನ್ಸ್ ನೆರಪ್ಪೆಲ್ ಉಪಸ್ಥಿತರಿದ್ದರು.
ಪ್ರಸ್ತುತ ಜೈಸನ್ ಪಟ್ಟೆರಿಲ್ ಅವರು ಕೆ.ಎಸ್.ಎಂ.ಸಿ.ಎ ಧರ್ಮಸ್ಥಳ ವಲಯದ ಅಧ್ಯಕ್ಷರಾಗಿರುತ್ತಾರೆ.