ಬೆಳ್ತಂಗಡಿ: ಜಮ್ಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವಾರ್ಷಿಕ ಮಹಾಸಭೆ ದಿ. ಜುಲೈ 06. 2024ರ ಶನಿವಾರ ಘಟಕದ ಕಛೇರಿಯಲ್ಲಿ ನಡೆಯಿತು.
ಅದ್ಯಕ್ಷತೆಯನ್ನು ಹಾಜಿ .ಬಿ ಶೇಕುಂಙಿ ವಹಿಸಿದ್ದರು.
ಕೇಂದ್ರ ಸಮಿತಿಯಿಂದ ವೀಕ್ಷಕರಾಗಿ ಶೇಕ್ ಅಬ್ದುಲ್ ಗಫೂರ್ ಮೂಡಬಿದ್ರೆ, ಹಾಗೂ ಹಾಜಿ ಎಂ.ಎಚ್ ಇಕ್ಬಾಲ್ ಬಂಟ್ವಾಳ ಆಗಮಿಸಿದ್ದರು.
ವೇದಿಕೆಯಲ್ಲಿ ಹಾಜಿ ಅಬ್ದುಲ್ ಲತೀಪ್ ಸಾಹೇಬ್ ಉಪಸ್ಥಿತರಿದ್ದರು.
ಉಮರ್ ಸ್ವಾಗತಿಸಿದರು. ಆಲಿಯಬ್ಬ ಪುಲಾಬೆ ವರದಿ ವಾಚಿಸಿದರು. ಅಬ್ಬೋನು ಮದ್ದಡ್ಕ ಲೆಕ್ಕಪತ್ರ ಮಂಡನೆ ಮಾಡಿದರು. ಉಮರ್ ನಾಡ್ಜೆ ದನ್ಯವಾದ ಸಮರ್ಪಿಸಿದರು.