ತೋಟತ್ತಾಡಿ: ಶ್ರೀ ಕ್ಷೇತ್ರ ಧ.ಗ್ರಾ.ಯೋ ನೆರಿಯ ವಲಯದ ಜನಜಾಗೃತಿ ಕಾರ್ಯಕ್ರಮ ಅಂಗವಾಗಿ ವಿಶ್ವ ಮಾದಕ ವಿರೋಧಿ ದಿನಾಚರಣೆ ನಡೆಯಿತು.
ಉದ್ಘಾಟನೆಯನ್ನು ಜನಜಾಗೃತಿ ವಲಯ ಅಧ್ಯಕ್ಷ ರಾಜೇಂದ್ರ ಇಂದ್ರ ನೆರವೇರಿಸಿದರು. ಜನಜಾಗೃತಿ ಮಾಜಿ ತಾಲೂಕು ಅಧ್ಯಕ್ಷ ಡಿ.ಎ ರೆಹಮಾನ್, ನೆರಿಯ ಒಕ್ಕೂಟಗಳ ವಲಯಾಧ್ಯಕ್ಷ ಸತೀಶ್ ಕೆ., ಎಲ್ಲಾ ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಪದಾಧಿಕಾರಿಗಳು, ಭಜನೆ ಮಂಡಳಿಗಳ ಪದಾಧಿಕಾರಿಗಳು, ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಧರಿದ್ದರು.
ಸೇವಾಪ್ರತಿನಿಧಿ ಸುಮಿತ್ರ ಸ್ವಾಗತಿಸಿ, ಸೇವಾಪ್ರತಿನಿಧಿ ಯಶೋಧ ಧನ್ಯವಾದ ನೀಡಿದರು.
ವಲಯ ಮೇಲ್ವಿಚಾರಕ ನವೀನ್ ಕುಮಾರ್ ನಿರೂಪಿಸಿದರು.