Site icon Suddi Belthangady

ಮಳೆಗೆ ಧರೆಗುರುಳಿದ ಕಲ್ಮಂಜ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಮುಂಬಾಗ ಇದ್ದ ಪುರಾತನವಾದ ಅಶ್ವತ್ಥ ವೃಕ್ಷ

ಕಲ್ಮಂಜ: ಕಲ್ಮಂಜ ಗ್ರಾಮದ ಇತಿಹಾಸ ಪ್ರಸಿದ್ಧ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಮುಂಬಾಗ ಇದ್ದ ಪುರಾತನವಾದ ಅಶ್ವತ್ಥ ವೃಕ್ಷವು ಜು.7ರಂದು ಸುರಿದ ಮಳೆಗೆ ಧರೆಗುರುಳಿದೆ.

ಕಲ್ಮಂಜ ಗ್ರಾಮದ ಪಜಿರಡ್ಕದಲ್ಲಿ ಪವಿತ್ರ ನೇತ್ರಾವತಿ ಮತ್ತು ಮೃತ್ಯುಂಜಯ ನದಿಯ ಸಂಗಮ ಸ್ಥಳದಲ್ಲಿ ಸುಮಾರು 800 ವರ್ಷಗಳ ಹಿಂದೆ ನಿರ್ಮಾಣಗೊಂಡ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕವು ನಂಬಿ ಬಂದ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಪವಿತ್ರ ಶಿವ ಸಾನಿಧ್ಯವಾಗಿ ಪ್ರಸಿದ್ಧಿಯನ್ನು ಪಡೆದಿದೆ.

Exit mobile version