ಮೂಡುಕೋಡಿ: ಮೂಡುಕೋಡಿಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಂಡದೊಂದಿಗೆ ಪಂಚಾಯತ್ ಸದಸ್ಯರು, ಹಾಗೂ ಗ್ರಾಮದ ಉತ್ಸಾಹೀ ಯುವಕರಿಂದ ತೋಟಗಾರಿಕಾ ಇಲಾಖೆಯಿಂದ ಖರೀದಿಸಿ ತಂದ ಸಪೋಟ ಹಾಗೂ ಕಸಿ ಪೇರಳೆ ಗಿಡಗಳನ್ನು ನೆಡುವ ಕಾರ್ಯಕ್ರಮ ನಡ್ತಿಕಲ್ಲು ಭಜನಮಂದಿರ, ಮೂಡುಕೋಡಿ ಶಾಲೆ ಹಾಗೂ ಬಜಿರೆಯ ಮೋಕ್ಷದ್ವಾರ ಹಿಂದೂ ರುದ್ರಭೂಮಿಯ ಪರಿಸರದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜು.7ರಂದು ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು. ಹಾಗೂ ಬಜಿರೆಯಲ್ಲಿರುವ ಹಿಂದೂ ರುದ್ರಭೂಮಿಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಭಾಸ್ಕರ್ ಪೈ , ಪ್ರಗತಿಪರ ಕೃಷಿಕ ಶಶಿಇಂದ್ರ ಜೈನ್, ಪಂಚಾಯತ್ ಸದಸ್ಯರಾದ ಉಮೇಶ್ ನಡ್ತಿಕಲ್ಲು, ಹರೀಶ್. ಪಿ ಎಸ್, ವೀಣಾ ದೇವಾಡಿಗ, ಪ್ರಮುಖರಾದ ಸದಾನಂದ ಪೂಜಾರಿ ಹುಳ್ಳೋಡಿ, ಹರೀಶ್ ಕನಿಕ್ಕಿಲ, ಗೋಪಾಲ್, ಅಶೋಕ ಪೂಜಾರಿ, ಗೀತಾ, ನಳಿನಾಕ್ಷಿ, ಮೀನಾಕ್ಷಿ, ಕೃಷ್ಣಪ್ಪ ಮೇರ, ವನಿತಾ, ಅಶೋಕ್ ಹೆಗ್ಡೆ, ರಾಜು ಉಂಬೆಟ್ಟು, ಮೊದಲಾದವರು ಜೊತೆಯಲ್ಲಿದ್ದು ಸಹಕರಿಸಿದರು.