Site icon Suddi Belthangady

ಬೆಳ್ತಂಗಡಿ: ಹೆಬೆಬೈಲ್ ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿ ತಡೆಗೋಡೆ ಹಾಗೂ ವಿದ್ಯುತ್ ಕಂಬ

ಬೆಳ್ತಂಗಡಿ: ರಸ್ತೆಯಲ್ಲಿ ದಿನನಿತ್ಯ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು, ನಾಗರಿಕರು, ವಾಹನಗಳು ಸಂಚರಿಸುತ್ತಿದ್ದು, ಇದೇ ರಸ್ತೆಯಲ್ಲಿ ಸರಕಾರಿ ಆಸ್ಪತ್ರೆಯ ತಡೆಗೋಡೆ ಅಪಾಯಕರ ಮಟ್ಟದಲ್ಲಿ ರಸ್ತೆ ಕಡೆಗೆ ವಾಲಿಕೊಂಡಿದೆ.

ತಡೆಗೋಡೆಯ ಒಳಭಾಗದಲ್ಲಿ ಇದಕ್ಕೆ ತಾಗಿಕೊಂಡೇ ಹಲವಾರು ಮರಗಳು ಕೂಡಾ ಇದ್ದು, ಜೋರು ಗಾಳಿ ಬೀಸಿದರೆ ತಡೆಗೋಡೆ ಬೀಳುವ ಮಟ್ಟದಲ್ಲಿದೆ. ಇದರ ಎದುರುಭಾಗದಲ್ಲಿ ವಿದ್ಯುತ್ ಕಂಬ ಕೂಡಾ ಮರಗಳಿಂದ ಆವೃತವಾಗಿ ಭಾರಿ ಅಪಾಯಕರ ಸ್ಥಿತಿಯಲ್ಲಿದ್ದು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಇದನ್ನು ತೆರವುಗೊಳಿಸಬೇಕೆಂದು ಇಲ್ಲಿನ ನಿವಾಸಿಗಳ ಬೇಡಿಕೆ.

Exit mobile version