ಬೆಳಾಲು: ಆಟೋ ಚಾಲಕ ಬೆಳಾಲು ಗ್ರಾಮದ ಪುಚ್ಚೆಹಿತ್ಲು ನಿವಾಸಿ ವಿಶ್ವನಾಥ ಗೌಡ ಆಕಸ್ಮಿಕ ಮರದಿಂದ ಬಿದ್ದು ಆಸ್ಪತ್ರೆಯಲ್ಲಿ ತೀವ್ರ ನಿಘ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಚಿಕಿತ್ಸೆ ವೆಚ್ಚಕ್ಕಾಗಿ, ಹಾಲು ಉತ್ಪಾದಕರ ಸಂಘ ಬೆಳಾಲು, ರಿಕ್ಷಾ ಮಾಲಕರ ಚಾಲಕರ ಸಂಘ ಬೆಳಾಲು, ಮಾಯ ಫ್ರೆಂಡ್ಸ್ ಮಾಯಾ ಹಾಗೂ ವಿಶ್ವನಾಥ ಚಿಕಿತ್ಸಾ ವೆಚ್ಚ ವಾಟ್ಸಪ್ ಗ್ರೂಪ್ ಸಂಘ-ಸಂಸ್ಥೆಗಳ ಮೂಲಕ ಧನ ಸಂಗ್ರಹ ಮಾಡಲಾಗಿದ್ದು. ಅವರ ಚಿಕಿತ್ಸೆ ಫಲಕಾರಿ ಆಗದೆ ನಿಧನರಾದರು ಒಟ್ಟು ಸಂಗ್ರಹ ಆಗಿರುವ ರೂ.2,06,000/ ಮೊತ್ತವನ್ನು ಅವರ ಮಕ್ಕಳಾದ ಅಭಿಜ್ಞ ಮತ್ತು ಅಭಯ್ ಅವರ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಲಾದ ದಾಖಲೆ ಪತ್ರಗಳನ್ನು ಅವರ ಧರ್ಮ ಪತ್ನಿ ಧಮಯಂತಿ ಮತ್ತು ಮಕ್ಕಳಿಗೆ ಜು.7ರಂದು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಮಾಯ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪುಚ್ಚೆಹಿತ್ತಿಲು, ಕಾರ್ಯದರ್ಶಿ ಗಣೇಶ್ ಕನಿಕ್ಕಿಲ, ಮಾಯಾ ಫ್ರೆಂಡ್ಸ್ ನ ಸದಸ್ಯ ವಿಶ್ವಾಸ್ ಗಾಂಧಿನಗರ, ಬೆಳಾಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ, ರಿಕ್ಷಾ ಮಾಲಕರ ಚಾಲಕರ ಸಂಘದ ಸದಸ್ಯ ಮಾಧವ ಗೌಡ ಓನಾಜೆ ,ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಸುಕೇಶ್, ನಿರ್ದೇಶಕ ಜಿನೇಶ್ ಜೈನ್ ಬೆಳಾಲು, ವಿಶ್ವನಾಥ್ ಗೌಡ ಚಿಕಿತ್ಸಾ ವೆಚ್ಚ ವಾಟ್ಸಪ್ ಗ್ರೂಪ್ ಸದಸ್ಯರಾದ ನಜೀರ್ ಮಾಯಾ, ಕಾಸಿಂ ಮಾಯ ಉಪಸ್ಥಿತರಿದ್ದರು.