Site icon Suddi Belthangady

ಉಜಿರೆ: ಸಂಜೀವಿನಿ ಮಾಸಿಕ ಸಂತೆ

ಬೆಳ್ತಂಗಡಿ: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮ ಜೀವನೋಪಾಯ ಸಂವರ್ಧನ ಸಂಸ್ಥೆ, ಮಂಗಳೂರು ಜಿಲ್ಲಾ ಪಂಚಾಯತ್, ಬೆಳ್ತಂಗಡಿ ತಾಲೂಕು ಪಂಚಾಯತ್ ಹಾಗೂ ಉಜಿರೆ ಗ್ರಾ.ಪಂ. ಪ್ರೇರಣಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸಂಜೀವಿನಿ ಮಾಸಿಕ ಸಂತೆ ಜು.6ರಂದು ಉಜಿರೆ ಪ್ರೇರಣಾ ಹಳ್ಳಿ ಸಂತೆ ಪ್ರಾಂಗಣದಲ್ಲಿ ನಡೆಯಿತು.

ಪ್ರೇರಣಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶೀಲಾವತಿ ಅಧ್ಯಕ್ಷತೆ ವಹಿಸಿದ್ದರು.

ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಬರಮೇಲು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ನೇತ್ರಾವತಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷ ಮಧುರಾ, ಉಜಿರೆ ಗ್ರಾ.ಪಂ. ಸದಸ್ಯರುಗಳಾದ ನಾಗೇಶ್ ರಾವ್, ಸಂಧ್ಯಾ ಹಾಗೂ ದೇವಕಿ ಉಪಸ್ಥಿತರಿದ್ದರು.

ಸಂತೆಯಲ್ಲಿ ಏನಿತ್ತು:
ಸಂಜೀವಿನಿ ಮಾಸಿಕ ಸಂತೆಯಲ್ಲಿ ಸೋಪ್, ನ್ಯೂಟ್ರಿಮಿಕ್ಸ್ , ವಿಳ್ಯದೆಲೆ, ಗೆಣಸು, ಹಲಸಿನ ಹಣ್ಣು, ಹಲಸಿನ ಹಣ್ಣಿನ ಬೀಜ, ಜೋಳ ರೊಟ್ಟಿ, ಫಿನಾಯಿಲ್, ತೆಂಗಿನ ಎಣ್ಣೆ, ಜೇನು ತುಪ್ಪ, ತುಪ್ಪ, ಬತ್ತಿ, ಕರಿ ಕೆಸು, ಬ್ರಾಹ್ಮೀ, ನುಗ್ಗೆ ಸೊಪ್ಪು ಹಾಗೂ ಇತ್ಯಾದಿ ವಸ್ತುಗಳು ಮಾರಾಟ ನಡೆಯಿತು. ಪ್ರತಿ ತಿಂಗಳ ಮೊದಲ ಶನಿವಾರ ಸಂಜೀವಿನಿ ಮಾಸಿಕ ಸಂತೆ ನಡೆಯಲಿದೆ.

ವಿವಿಧ ಸಂಜೀವಿನಿ ಒಕ್ಕೂಟದಿಂದ ಆಗಮಿಸಿದ ಎಮ್ ಬಿ.ಕೆ. ಎಲ್ ಸಿ ಆರ್ ಪಿ ಹಾಗೂ ಉತ್ಪನ್ನಗಳನ್ನು ತಂದಿರುವ ಗುಂಪಿನ ಸದಸ್ಯರು ಭಾಗವಹಿಸಿದ್ದರು.

ಎನ್ ಆರ್ ಎಲ್ ಎಮ್. ತಾಲೂಕು ನಿರ್ವಹಣಾ ಘಟಕದ ಸಿಬ್ಬಂದಿಗಳು ಹಾಜರಿದ್ದರು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ವಂದಿಸಿ, ಜಯಾನಂದ ಕಾರ್ಯಕ್ರಮ ನಿರೂಪಿಸಿದರು.

ತಾಲೂಕು ವ್ಯವಸ್ಥಾಪಕ ನಿತೀಶ್ ಮತ್ತು ವಲಯ ಮೇಲ್ವಿಚಾರಕಿ ವೀಣಾಶ್ರೀ ಕೆ.ಕೆ ಸಹಕರಿಸಿದರು.

Exit mobile version