Site icon Suddi Belthangady

ನಡ: ಫ್ರಾನ್ಸಿಸ್ ಮೊರಾಸ್ ಹೃದಯಾಘಾತದಿಂದ ನಿಧನ

ನಡ: ಇಲ್ಲಿಯ ಕೆಳಗಿನ ಸುರ್ಯ ಮನೆಯ ಫ್ರಾನ್ಸಿಸ್ ಮೊರಾಸ್ (73) ಜು. 6ರಂದು ಸ್ವಗ್ರಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪ್ರಗತಿಪರ ಕೃಷಿಕರಾಗಿದ್ದು, ಉಜಿರೆ ಸಂತ ಅಂತೋನಿ ಚರ್ಚ್ ನ ಸುರ್ಯ ವಾಳೆಯ ಗುರಿಕಾರರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ರೀಟಾ ಮೊರಾಸ್, ಪುತ್ರ ಲಾರೆನ್ಸ್ ಮೊರಾಸ್, ಪುತ್ರಿಯರಾದ ಫಿಲೋಮಿನಾ ಮೊರಾಸ್, ಫ್ಲೋಸ್ಸಿ ಮೊರಾಸ್, ವೆರೋನಿಕಾ ಮೊರಾಸ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Exit mobile version