ಇಂದಬೆಟ್ಟು: ಇಂದಬೆಟ್ಟು ಗ್ರಾಮದ ಬಂಗಾಡಿ, ಬೆದ್ರಬೆಟ್ಟು ಕೂಡಂಗೆ, ಎರ್ಮಾಲ ಪರಿಸರದಲ್ಲಿ ಒಂದು ವರ್ಷಗಳಿಂದ ನೆಟ್ವರ್ಕ್ ಸಮಸ್ಯೆಯಿದ್ದು. ಬಂಗಾಡಿಯಲ್ಲಿ ಬಿಎಸ್ಎನ್ಏಲ್ ಹಾಗೂ ಇಂದಬೆಟ್ಟುವಿನಲ್ಲಿ ಜಿಯೋ ಹಾಗೂ ಏರ್ಟೆಲ್ ಟವರ್ ಗಳಿದ್ದು, ತಿಂಗಳ ರೀಚಾರ್ಜ್ ಮಾಡದೆ ಇದ್ದರೆ ಸೀಮ್ ಡೆಡ್ ಆಗುವ ಉದ್ದೇಶದಿಂದ ಕಂಪೆನಿಯವರು ಸಮರ್ಪಕ ನೆಟ್ವರ್ಕ್ ನೀಡದೆ ಗ್ರಾಮಸ್ಥರ ಹಣವನ್ನು ದೊಚುತ್ತಿದ್ದಾರೆ.
ಇಲ್ಲಿ ಅಂಚೆ ಕಛೇರಿ, ಕೆನರ ಬ್ಯಾಂಕ್, ಸಹಾಕಾರಿ ಬ್ಯಾಂಕ್ ಹಾಗೂ ವ್ಯಾಪರಸ್ಥರಿಗೂ, ಉದ್ಯೋಗಿಗಳಿಗೆ ವ್ಯವಹಾರದ ಆನ್ ಲೈನ್ ಪೇ ಮಾಡುವುದಕ್ಕೊ ನೆಟ್ವರ್ಕ್ ಸಮಸ್ಯೆಗಳಿಂದ ತೊಂದರೆಗಳಾಗುತ್ತಿದ್ದು ಆಗತ್ಯ ಕರೆ ಮಾಡಲು ಗುಡ್ಡ ಹತ್ತುವ ಪರಿಸ್ಥೀತಿಯಾಗಿದೆ.
ಸಂಬಂಧಪಟ್ಟ ಆಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲ. ಇನ್ನೊಮ್ಮೆ ಸಂಬಂಧಪಟ್ಟ ಆಧಿಕಾರಿಗಳು ಕೂಡಲೆ ಈ ಪರಿಸರದ ಗ್ರಾಹಕರಿಗಾಗುವ ನೆಟ್ವರ್ಕ್ಸ್ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.