ನೆರಿಯ: ಆರೋಗ್ಯ ಇಲಾಖೆಯ ಸ್ವಚ್ಛತೆಗಾಗಿ ರೋಗ ಹರಡದಂತೆ ಎಲ್ಲೆಡೇ ಆಶಾ ಕಾರ್ಯಕರ್ತೆಯರ ಮೂಲಕ ಅಭಿಯಾನ ಮಾಡುತ್ತಿದೆ.ಇಡೀ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣ ಹೆಚ್ಚು ಆಗುತ್ತಿದೆ.ಇಲಾಖೆ ಮುನೆಚ್ಚರಿಕೆ ಕ್ರಮಕೈಗೊಳ್ಳುತ್ತಿದೆ.ವಿಪರ್ಯಾಸವೆಂದರೆ ಎಲ್ಲರಿಗೂ ಸ್ವಚ್ಛತೆ ಕರೆ ನೀಡುವ ಆರೋಗ್ಯ ಇಲಾಖೆ ನೆರಿಯದಲ್ಲಿ ಆರೋಗ್ಯ ಅಧಿಕಾರಿಗಳು ಇದ್ದಾರ ಇಲ್ಲವೋ ಎಂಬ ಗೊತ್ತಿಲ್ಲದ ಸ್ಧಿತಿಯಲ್ಲಿದೆ.
ಆರೋಗ್ಯ ಇಲಾಖೆಗೆ ಸೇರಿದ ಜಾಗದ ಸುತ್ತ ಹಾಗೂ ಪ್ರಾ.ಆರೋಗ್ಯ ಕೇಂದ್ರದ ಕ್ವಾಟ್ರಾಸ್ ಸುತ್ತ ಮುತ್ತ ದೊಡ್ಡ ಪೊದೆಯಿಂದ ಆವರಿಸಿದೆ.ಹತ್ತಿರ ಸುಮಾರು ಮನೆಗಳು ಇದೆ. ಸಂಜೆಯ ಹೊತ್ತು ಸೊಳ್ಳೆಗಳು ಹೆಚ್ಚಿನ ಸಂಖ್ಯೆ ಇರುತ್ತದೆ. ಸಾರ್ವಜನಿಕರಿಗೆ ಒಳ್ಳೆಯ ಆರೋಗ್ಯ ಮಾರ್ಗದರ್ಶನ ನೀಡಬೇಕಾದ ಇಲಾಖೆ ಕೈ ಚೆಲ್ಲಿ ಹೋಗಿದೆ.
ಕುಸಿಯುವ ಹಂತದಲ್ಲಿ ಇರುವ ಕಟ್ಟಡ: ಪ್ರಾ.ಆರೋಗ್ಯ ಕೇಂದ್ರದ ಕ್ವಾಟ್ರಾಸ್ ಸದ್ಯ ಸಂಪೂರ್ಣ ಕುಸಿವ ಹಂತದಲ್ಲಿ ಇದೆ. ಕಟ್ಟಡದ ಒಳಗೆ ಹಾವುಗಳು ಇರಬಹುದು ಎಂದು ಸ್ಧಳೀಯರು ಎನ್ನುತ್ತಾರೆ ಆದರೂ ಸುತ್ತಲಿನ ಮನೆ ಮಂದಿಗೆ ರೋಗ ಹರಡುವಲ್ಲಿ ಸಂಶಯವಿಲ್ಲ.ಸರಕಾರ ಇತ್ತ ಗಮನಿಸಬೇಕೆಂದು ಗ್ರಾಮಸ್ಧರು ಒತ್ತಾಯಿಸಿದ್ದಾರೆ.