ಉಜಿರೆ: ಗುರಿಪಳ್ಳ ಇಂದಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬಿರುಕು ಬಿಟ್ಟ ಪರಿಣಾಮ ಜಿಲ್ಲಾಧಿಕಾರಿಗಳ ಆದೇಶದಂತೆ ಘನವಾಹನ ಸಂಚಾರ ನಿಷೇಧಿಸಿದ ಪರಿಣಾಮ ಈ ರಸ್ತೆಯ ಮೂಲಕ ಸಂಚರಿಸುವ ಪ್ರಮುಖವಾಗಿ ಶಾಲಾ ಮಕ್ಕಳಿಗೆ ಪ್ರಯಾಣಿಕರಿಗೆ ತೊಂದರೆ ಉಂಟಾಗಿರುತ್ತದೆ.
ಈ ಬಗ್ಗೆ ಶಾಸಕ ಹರೀಶ್ ಪೂಂಜಾರವರ ಗಮನಕ್ಕೆ ತಂದು ಅವರ ಸೂಚನೆಯಂತೆ ಕೆ ಎಸ್ ಆರ್ ಟಿ ಸಿ ಘಟಕದ ಅಧಿಕಾರಿಗಳನ್ನು ಭೇಟಿಯಾಗಿ ಬಸ್ ವ್ಯವಸ್ಥೆಯನ್ನು ಪರ್ಯಾಯ ರಸ್ತೆಯಾದ ಗುರಿಪಳ್ಳ-ಕಜೆ, ಶಾಂತಿನಗರ-ಇಂದಬೆಟ್ಟು-ಬೆಳ್ಳೂರಬೈಲು-ಕಾನರ್ಪ-ಸೊಮಂತಡ್ಕ-ಉಜಿರೆ ಮೂಲಕ ಒದಗಿಸಿಕೊಡುವಂತೆ ಶಾಸಕರ ಸೂಚನೆಯಂತೆ ಜುಲೈ 04ರಂದು ಅಧಿಕಾರಿಗಳಿಗೆ ತಿಳಿಸಲಾಯಿತು.
ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಬಸ್ ಬರುವ ಸಮಯವನ್ನು ನಿಗದಿ ಪಡಿಸಲು ಸೂಚಿಸಲಾಯಿತು. ವಾಸ್ತವ ವಿಷಯ ತಿಳಿದ ಅಧಿಕಾರಿಗಳು ಬಸ್ ವ್ಯವಸ್ಥೆ ಸರಿಯಾದ ಸಮಯಕ್ಕೆ ಮಾಡುವುದಾಗಿ ತಿಳಿಸಿದರು. ನಡ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿವಾಕರ ಕರ್ಕೆರ, ಹಿರಿಯರಾದ ಜಯಂತ್ ಗೌಡ ಗುರಿಪಳ್ಳ, ವಿನಯ್ ಕೆ ಗುರಿಪಳ್ಳ ಉಪಸ್ಥಿತರಿದ್ದರು.