Site icon Suddi Belthangady

ಮದ್ದಡ್ಕದಲ್ಲಿ ನೆಟ್ವರ್ಕ್ ಸಮಸ್ಯೆ

ಮದ್ದಡ್ಕ: ಬೆಳ್ತಂಗಡಿ ತಾಲೂಕಿನ ಮದ್ದಡ್ಕದಲ್ಲಿ ವಿಪರೀತ ನೆಟ್ವರ್ಕ್ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಮದ್ದಡ್ಕ, ನೇರಳಕಟ್ಟೆ, ಪಣಕಜೆ ಭಾಗದಲ್ಲಿ ಏರ್ಟೆಲ್ ಹಾಗೂ ಬಿಎಸ್ಎನ್ಎಲ್ ನ ಮೂರು ಟವರ್ ಗಳಿದ್ದು ಏನೂ ಪ್ರಯೋಜನವಿಲ್ಲದಂತಾಗಿದೆ.

ಈ ಟವರ್ ಗಳ ಅಡಿಯಲ್ಲಿ ನಿಂತರೂ ನೆಟ್ವರ್ಕ್ ಸಿಗುತ್ತಿಲ್ಲ.ಉದ್ಯೋಗಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಈ ನೆಟ್ವರ್ಕ್ ಸಮಸ್ಯೆಯಿಂದ ಆಗುವ ತೊಂದರೆಯಾಗುತ್ತಿದೆ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವೆರಿ ಬಾಯ್ ಗಳು ತಗೊಂಡು ಬಂದು ಆರ್ಡರ್ ಮಾಡಿದವರಿಗೆ ತಲುಪಿಸೋಣ ಅಂದ್ರೆ ಮನೆಯ ಮುಂಭಾಗಕ್ಕೆ ಬಂದರೂ ನೆಟ್ವರ್ಕ್ ಇಲ್ಲಾ.

ಸಂಬಂಧಪಟ್ಟ ಕಂಪನಿಯ ಅಧಿಕಾರಿಗಳಿಗೆ ದೂರು ಕೊಟ್ಟು ಪ್ರಯೋಜನವಾಗುತ್ತಿಲ್ಲ. ಆದಷ್ಟು ಬೇಗ ಸಂಬಂಧಪಟ್ಟವರು ನೆಟ್ವರ್ಕ್ ಸಮಸ್ಯೆಯನ್ನು ನಿವಾರಿಸಬೇಕಾಗಿ ನಾಗರಿಕರು ಆಗ್ರಹಿಸಿದ್ದಾರೆ.

Exit mobile version