ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ಅಭಿಯಾನ ನಡೆಯಿತು. ಉಪಪ್ರಾಚಾರ್ಯ ಡಾ.ರಾಜೇಶ್ ಬಿ. ಅವರು ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ಲಾಸ್ಟಿಕ್ ಬಳಕೆ ಮಾಡಬಾರದು ಆದಷ್ಟು ಸಾಮಗ್ರಿ ಇತ್ಯಾದಿ ತರಲು ಬಟ್ಟೆಯಿಂದ ಮಾಡಿದ ಚೀಲ ಇತ್ಯಾದಿಗಳನ್ನು ಬಳಸಬೇಕು. ಪ್ಲಾಸ್ಟಿಕ್ ವಸ್ತುಗಳು ಭೂಮಿಯಲ್ಲಿ ಬಿದ್ದು ಕರಗದೆ ಅನೇಕ ಜೀವ ಸಂಕುಲಗಳಿಗೆ ಮಾರಕವಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಆಶಯ ಭಾಷಣ ಮಾಡಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು. ಸ್ವಯಂ ಸೇವಕರಾದ ಸಾನ್ವಿ ಹಾಗೂ ಇಬ್ಬನಿ ಅವರು ಪ್ಲಾಸ್ಟಿಕ್ ಬ್ಯಾಗ್ ಮುಕ್ತ ಅಭಿಯಾನದಲ್ಲಿ ಮಾತನಾಡಿದರು.ಸಾಕ್ಷಿ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಉಜಿರೆ ಪರಿಸರದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಯಂ ಸೇವಕರು ನಾಯಕರಾದ ಆದಿತ್ಯ ಹಾಗೂ ಪ್ರಾಪ್ತಿಯವರ ನೇತೃತ್ವದಲ್ಲಿ ಸ್ವಚ್ಛಗೊಳಿಸಿ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ಅಭಿಯಾನದಲ್ಲಿ ಭಾಗವಹಿಸಿದರು.