Site icon Suddi Belthangady

ಉಜಿರೆ: ಶ್ರೀ ಧ.ಮಂ.ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಬಗ್ಗೆ ಮಾಹಿತಿ ಕಾರ್ಯಕ್ರಮ

ಉಜಿರೆ: ಶ್ರೀ ಧ.ಮಂ.ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪಿಯುಸಿ ನಂತರ ಏನು ಮಾಡೋದು? ಅನ್ನುವುದು ಪ್ರತಿಯೊಂದು ವಿದ್ಯಾರ್ಥಿಗೆ ಹಾಗೂ ಹೆತ್ತವರಿಗೆ ಕಾಡೋ ಪ್ರಶ್ನೆ, ಈ ಕುರಿತಾಗಿ ಕಾಲೇಜಿನ ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಮುಂದೇನು ಮಾಡಿದರೆ ಅನುಕೂಲ, ಯಾವ ಕ್ಷೇತ್ರಗಳಲ್ಲಿ ಯಾರಿಗೆ ಅವಕಾಶ, ಅವಕಾಶಗಳನ್ನು ಗೆಲ್ಲುವ ಯಾವ ಪರೀಕ್ಷೆಗಳಿಗೆ ಯಾವ ಹಂತದಲ್ಲಿ ತಯಾರಿ ನಡೆಸಬೇಕು, CET /NEET/JEE ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹೇಗೆ ಸಜ್ಜಾಗಬೇಕು ಎಂಬಿತ್ಯಾದಿ ವಿಷಯಗಳ ಸವಿಸ್ತಾರ ಮಾಹಿತಿಯನ್ನು ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ವಿಕ್ರಂ.ಪಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಉಪಸ್ಥಿತರಿದ್ದರು.ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ಕೃಷ್ಣಪ್ರಸಾದ್ ಕೆ.ಪಿ ನಿರೂಪಿಸಿ, ವಂದಿಸಿದರು.

Exit mobile version