ನೆರಿಯ: ಗ್ರಾಮ ಪಂಚಾಯತ್ ಮುಚ್ಚಿರಾಲಿ ಎಂಬಲ್ಲಿ ಕಾಲುಸಂಕದ ಎರಡು ಬದಿ ಜರಿದು ಬೀಳುತ್ತಿದ್ದು ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಮತ್ತು ಅದರ ಬದಿಯಲ್ಲಿರುವ ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಗಮನಕ್ಕೆ ಗ್ರಾಮ ಪಂಚಾಯತ್ ಮೂಲಕ ತಿಳಿಸಿದ್ದು ಅದರಂತೆ ಜು.3ರಂದು ಅರಣ್ಯ ಇಲಾಖೆಯ ಫಾರೆಸ್ಟ್ ರವಿಚಂದ್ರ ಮತ್ತು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ವಿಭಾಗದ ರಾಕೇಶ್ ಮತ್ತು ನೆರಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಾ, ಕಾರ್ಯದರ್ಶಿ ಅಜಿತ್ ಯಂ ಬಿ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಬಿ ಅಶ್ರಫ್ ನೆರಿಯಾ, ಸದಸ್ಯರಾದ ರಮೇಶ್ ಕೆ.ಎಸ್. ಪಂಚಾಯತ್ ಸಿಬ್ಬಂದಿಗಳಾದ ಮದುಮಲಾ ಸ್ಥಳಕ್ಕೆ ಭೇಟಿ ನೀಡಿದ್ದು ತುರ್ತು ಅಪಾಯದಲ್ಲಿರುವ ಮರವನ್ನು ತೆರವುಗೊಳಿಸುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಬಾಲಕೃಷ್ಣ ಗೌಡ, ಸಂಜೀವ ಗೌಡ, ಸೋಮಪ್ಪ ಗೌಡ, ಹಾಗೂ ಇತರರು ಉಪಸ್ಥಿತರಿದ್ದರು.