Site icon Suddi Belthangady

ಎಂಡೋಪೀಡಿತ ವಿಕಲಚೇತನರಿಗೆ ಮನೆಯಲ್ಲಿಯೇ ಆಧಾರ್ ಕಾರ್ಡ್

ಬೆಳ್ತಂಗಡಿ: ತಾಲೂಕಿನ 18ವರ್ಷ ಕೆಳಗಿನ 5 ಮಂದಿ ಎಂಡೋಪೀಡಿತ ವಿಕಲಚೇತನರು ಮಲಗಿದ್ದಲ್ಲಿಯೇ ಇದ್ದು, ಅವರಿಗೆ ಆಧಾರ್ ಕಾರ್ಡ್ ಇಲ್ಲದೆ ಮಾಸಾಶನ ಮತ್ತು ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿದ್ದರು. ಅವರ ಮನೆಗಳಿಗೆ ತೆರಳಿ ಆಧಾರ್ ಕಾರ್ಡ್ ಮಾಡಲಾಯಿತು.

ಎಂಡೋಸಲ್ಫಾನ್ ವಿಕಲಚೇತನರಾದ ಉಜಿರೆಯ ಅಂಚಲ್ ಡಿ’ಸೋಜ, ಲತ್ವಿಕ್ ಮುಂಡೂರು, ತನುಶ್ರೀ ಶಿರ್ಲಾಲು, ವೇಣೂರಿನ ಅಝ ನಫೀಸಾ ಹಾಗೂ ಪೆರಾಡಿ ಗ್ರಾಮದ ಜೈಸನ್ ವಿನೀತ್ ಗೊನ್ಸಾಲ್ವಿಸ್ ಮಲಗಿದಲ್ಲೇ ಇದ್ದು, ಎಂಡೋಪೀಡಿತ ವಿಕಲಚೇತನರ ಆಧಾರ್‌ನಲ್ಲಿದ್ದ ತಿದ್ದುಪಡಿ ಹಾಗೂ ಇತರ ಸಮಸ್ಯೆಗಳನ್ನು ಸರಿಪಡಿಸಿ ಆಧಾರ್ ನೀಡಲಾಗಿದೆ.

ಬೆಳ್ತಂಗಡಿ ತಾಲೂಕು ಕಚೇರಿಯ ಆಧಾರ್ ಕೇಂದ್ರದ ಸಿಬ್ಬಂದಿ ಸುಜಯ ಹಾಗೂ ಗ್ರಾಮ ಪಂಚಾಯತ್‌ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ, ಗಣೇಶ್ ಗಾಣಿಗ, ಹರೀಶ್ ಹಾಗೂ ದಿವ್ಯಾ ಎನ್. ಸಹಕರಿಸಿದ್ದಾರೆ. ತಹಶೀಲ್ದಾರ್ ಪೃಥ್ವಿ ಸಾನಿಕಂ ಬಳಿ ತಾಲೂಕು ವಿಕಲಚೇತನರ ಮೇಲ್ವಿಚಾರಕ ಜೋನ್ ಬ್ಯಾಪ್ಟಿಸ್ಟ್ ಈ ಕುರಿತು ಅವರ ಬಳಿ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಮನೆ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಲು ಅವಕಾಶ ಕಲ್ಪಿಸಿದ್ದರು.

Exit mobile version