Site icon Suddi Belthangady

ಡಾ|ರಿತೇಶ್ ಕೊಯ್ಯೂರು ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶ

ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ|ರಿತೇಶ್ ಕುಮಾರ್ ಕೊಯ್ಯೂರು ಇವರು INICET ಪರೀಕ್ಷೆಯಲಿ 679 ರ‍್ಯಾಂಕ್ ಪಡೆದು ದೆಹಲಿಯ ಪ್ರತಿಷ್ಠಿತ ಎಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದಾರೆ.

ಎಂ.ಬಿ.ಬಿ.ಎಸ್ ಪದವಿಯನ್ನು ಕಾರವಾರದ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಮುಗಿಸಿದ ಇವರು ತನ್ನ ಪಿಯುಸಿಯನ್ನು ಉಜಿರೆಯ ಎಸ್.ಡಿಎಂ ಪಿಯು ಕಾಲೇಜಿನಲ್ಲಿ 95.5 ಶೇಕಡಾ ಅಂಕದೊಂದಿಗೆ ಉತ್ತೀರ್ಣರಾಗಿದ್ದರು. ತನ್ನ ಪಿಯುಸಿ ಸಮಯದಲ್ಲಿ ಉಚಿತ ಪ್ರವೇಶ, ಉಚಿತ ಮಧ್ಯಾಹ್ನ ಊಟ ಹಾಗೂ ಉಚಿತ ನೀಟ್ ಹಾಗೂ ಸಿಇಟಿ ಪರೀಕ್ಷೆ ಕೋಚಿಂಗ್ ಒದಗಿಸಿದ ಹೆಗ್ಗಡೆಯವರಿಗೆ ತಾನು ಆಭಾರಿಯಾಗಿದ್ದೇನೆ ಎನ್ನುವ ಇವರು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ತನಗೆ ದೆಹಲಿಯ ಪ್ರತಿಷ್ಟಿತ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ.

ಇವರ ತಂದೆ ರಾಮಣ್ಣ ಪೂಜಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಿಬ್ಬಂದಿಯಾಗಿದ್ದು, ಹಲವಾರು ವರ್ಷ ಸೇವೆ ಸಲ್ಲಿಸಿದ್ದರು. ಇವರ ತಾಯಿ ಶಾಂತಿ, ಅಜ್ಜಿ ಗುಲಾಬಿ ಹಾಗೂ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ|ದೇವೇಂದ್ರ ಕುಮಾರ್. ಪಿ, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಇವರಿಗೆ ಶುಭ ಹಾರೈಸಿದರು.

Exit mobile version