ಉಜಿರೆ: ಉಜಿರೆ ವಲಯದ ಮಾಚಾರು ಕಾರ್ಯಕ್ಷೇತ್ರದ ಬದನಾಜೆಯಲ್ಲಿ ವಾಸವಾಗಿರುವ ಕೂಸಪ್ಪರವರಿಗೆ ವಾಸ್ತಲ್ಯ ಕಾರ್ಯಕ್ರಮದಡಿಯಲ್ಲಿ ತಿಂಗಳ ಮಾಶಾಸನ ನೀಡುತ್ತಿದ್ದು ಕೂಸಪ್ಪ ರವರ ಮನೆ ಮಳೆಗೆ ಮಾಡು ಕುಸಿದು ಬಿದ್ದು ಮಳೆಯ ನೀರು ಮನೆಯ ಒಳಗಡೆ ಬಿದ್ದು ಮನೆಯಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಜು.02ರಂದು ಈ ಬಗ್ಗೆ ವಿಪತ್ತು ತಂಡದ ಸದಸ್ಯರಿಗೆ ಮಾಹಿತಿ ನೀಡಿ ಸದ್ರಿ ಮನೆ ಭೇಟಿ ಮಾಡಿ, ಪರಿಶೀಲನೆ ಮಾಡಿದಾಗ ಸದ್ಯದ ಪರಿಸ್ಥಿತಿಗೆ ಮಾಡು ರಿಪೇರಿ ಮಾಡಲು ಸಾಧ್ಯವಾಗದ ಕಾರಣ ಯೋಜನಾಧಿಕಾರಿಯವರು ಮನೆಯ ಮೇಲ್ಛಾವಣಿಗೆ ಟರ್ಪಲ್ ಹಾಕುವ ಬಗ್ಗೆ ಸಲಹೆ ನೀಡಿದರು.ಈ ಬಗ್ಗೆ ಉಜಿರೆ-ಬೆಳಾಲು ಶೌರ್ಯ ನಿರ್ವಹಣಾ ಘಟಕಕ್ಕೆ ಮಾಹಿತಿ ನೀಡಿದ ಕೂಡಲೇ ಕುಟುಂಬದ ಮನೆಯ ಮೇಲ್ಛಾವಣಿಗೆ ಟಾರ್ಪಲ್ ಹಾಕಿ ಯಶಸ್ವಿಗೊಳಿಸಿದರು.