ಬೆಳಾಲು: ಪಾದಾಚಾರಿಗಳಿಗೆ ಸಂಕಟ ತಂದೊಡ್ಡಿರುವ ನಾರ್ಯ-ಬೆಳಾಲು ರಸ್ತೆ ಬದಿಯ ಬೇಲಿ ಸಸ್ಯಗಳನ್ನು ತೆರವಿಗೆ ಸುದ್ದಿ ಬಿಡುಗಡೆ ಕೆಲವು ದಿನಗಳ ಹಿಂದೆ ವರದಿ ಮಾಡಿತು.ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ದೊಂಡೊಲೆ, ನಾರ್ಯ ರಸ್ತೆಯ ಬದಿಯ ಎಲ್ಲ ಗಿಡಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಸುದ್ದಿ ಬಿಡುಗಡೆ ವರದಿ ಮಾಡಿದ ಬೆನ್ನಲ್ಲೇ ಜುಲೈ 3ರಂದು ಕೆಲಸ ಪ್ರಾರಂಭಗೊಂಡಿದ್ದು ಪ್ರಗತಿಯಲ್ಲಿದೆ ಇದರ ಜೊತೆಗೆ ವಿದ್ಯುತ್ ದಾರಿದೀಪಗಳನ್ನು ಸರಿಪಡಿಸುವ ಕಾರ್ಯವು ನಡೆಯುತ್ತಿದೆ.