ಪಿಲ್ಯ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲ ರಚನೆ ಜುಲೈ 01ರಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಮತ್ತು ನಾಯಕತ್ವದ ಗುಣ ಬೆಳೆಸಲು ಶಾಲಾ ಮಂತ್ರಿ ಮಂಡಲವನ್ನು ಚುನಾವಣೆಯ ಮೂಲಕ ರಚನೆ ಮಾಡಲಾಯಿತು.
ಮುಖ್ಯಮಂತ್ರಿಯಾಗಿ 10ನೇ ತರಗತಿಯ ಆಶೀರ್, ಉಪಮುಖ್ಯಮಂತ್ರಿಯಾಗಿ ಆಶಿಖ 8ನೇ ತರಗತಿ, ವಿರೋಧ ಪಕ್ಷದ ನಾಯಕರಾಗಿ ಆದ್ಯಾ 10ನೇ ತರಗತಿ ಮತ್ತು ಫಾತಿಮ ರಿಫ 9ನೇ ತರಗತಿ, ಶಿಕ್ಷಣ ಮಂತ್ರಿಯಾಗಿ ನುಮಸಾರ 9ನೇ ತರಗತಿ, ಉಪ ಶಿಕ್ಷಣ ಮಂತ್ರಿಯಾಗಿ ಹೆಚ್.ಎಸ್.ವಿಶಾನ್ 7ನೇ ತರಗತಿ, ಶಿಸ್ತು ಮಂತ್ರಿಯಾಗಿ ಮೊಹಮ್ಮದ್ ಮುನಾವರ್ ಆಲಿ 10ನೇ ತರಗತಿ, ಉಪ ಶಿಸ್ತು ಮಂತ್ರಿಯಾಗಿ ಅಶ್ವಿತ್ 8ನೇ ತರಗತಿ, ಕ್ರೀಡಾ ಮಂತ್ರಿಯಾಗಿ ಶೆರ್ವಿನ್ 10ನೇ ತರಗತಿ, ಉಪ ಕ್ರೀಡಾ ಮಂತ್ರಿಯಾಗಿ ಫಾತಿಮಾ ಶಿಹಾನ 10ನೇ ತರಗತಿ, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ದೀಪೇಶ್ 10ನೇ ತರಗತಿ, ಉಪ ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಬಿಬಿನಾಝ್ 7ನೇ ತರಗತಿ, ಸಾಂಸ್ಕೃತಿಕ ಮಂತ್ರಿಯಾಗಿ ಸಾನಿಕಾ 10ನೇ ತರಗತಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಸೃಜನ್ 8ನೇ ತರಗತಿ, ಸ್ಪೀಕರ್ ಆಗಿ ಚಿನ್ಮಯಿ ಮತ್ತು ಫಾವಾಝ್ 10ನೇ ತರಗತಿ, ಭಾಷಾ ಮಂತ್ರಿಯಾಗಿ ದಿತೀಕ್ಷ್ 10ನೇ ತರಗತಿ ಮತ್ತು ಮೊಹಮ್ಮದ್ ಅರ್ಫಾಝ್ 7ನೇ ತರಗತಿ ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆಗೆ ವಿವಿಧ ಮಂತ್ರಿಗಳು ಮುಖ್ಯ ಶಿಕ್ಷಕ ಮೆಲ್ವಿನ್ ರವರ ಮಾರ್ಗದರ್ಶನದೊಂದಿಗೆ ಶಾಲಾ ಸಂಚಾಲಕ ನಸೀರ್ ಅಹಮದ್ ಖಾನ್ ರವರ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ನಸೀರ್ ಅಹಮದ್ ಖಾನ್ ರವರು ಮಾತನಾಡುತ್ತಾ ಮಂತ್ರಿಗಳ ಜವಾಬ್ದಾರಿಗಳನ್ನು ಹೇಳಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಈ ಸಂದರ್ಭ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.