Site icon Suddi Belthangady

ಉಜಿರೆ: ಎನ್.ಜಿ ಪಟವರ್ಧನ್ ರವರಿಗೆ ನುಡಿನಮನ ಕಾರ್ಯಕ್ರಮ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ ), ಇಲ್ಲಿಯ ಕನ್ನಡ ವಿಭಾಗ ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜು.01ರಂದು ನಿಧನರಾದ ಪ್ರೊ.ನಾರಾಯಣ ಗೋವಿಂದ ಪಟವರ್ಧನ್ ರವರಿಗೆ ನುಡಿ ನಮನ ಸಲ್ಲಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ್ ಹೆಗ್ಡೆ ಮಾತನಾಡಿ “ವಿದ್ಯಾರ್ಥಿಗಳು ಹೇಗೆ ಕಾಲೇಜಿನ ಜೀವ ದ್ರವ್ಯಗಳೋ ಹಾಗೆಯೇ ಪ್ರಾಧ್ಯಾಪಕರು ಕೂಡ ಕಾಲೇಜಿನ ಜೀವ ದ್ರವ್ಯಗಳು. ಅದರಂತೆಯೇ ಎನ್.ಜಿ ಪಟವರ್ಧನ್ ರವರು ಪ್ರಾಧ್ಯಾಪಕರಾಗಿ ನಡೆದುಕೊಂಡವರು ಎಂದು ಅವರ ಜೀವನ ಮೌಲ್ಯಗಳನ್ನು ಸ್ಮರಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಮಾತನಾಡಿ “ಶ್ರೀ ಎನ್.ಜಿ ಪಟವರ್ಧನ್ ರವರು 30 ವರ್ಷಗಳ ಕಾಲ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕವಾಗಿ ಹಲವಾರು ಚಿಂತನೆಗಳನ್ನು ಹುಟ್ಟುಹಾಕಿದ್ದಾರೆ “ಎಂದು ಹೇಳಿದರು.

ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಯದುಪತಿಗೌಡ “ಶ್ರೀ ಎನ್. ಜಿ ಪಟವರ್ಧನ್ ರವರು ಮೇರು ವ್ಯಕ್ತಿತ್ವದವರು ಸಾಹಿತ್ಯದ ಕುರಿತು ಅಭಿರುಚಿಯನ್ನು ಹೊಂದಿದ್ದ ಇವರು ಹಲವಾರು ಕೃತಿಗಳನ್ನು ಬರೆದಿದ್ದಾರೆ ಹುಟ್ಟು ಸಾವಿನ ಮಧ್ಯೆ ಪಟವರ್ಧನ್ ರವರ ಸಾಧನೆಯ ನೆನಪೇ ಚಿರನೂತನ “ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಮತ್ತು ಕನ್ನಡ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version