ಬೆಳ್ತಂಗಡಿ: ಭಾರತದ ಸಂಸ್ಕೃತಿ ಸಚಿವಾಲಯದ ಸಾಹಿತ್ಯ ಅಕಾಡೆಮಿ ಮಂಗ್ಳುರ್ಚಿಂ ಮೋತಿಯಮ್ ಸಹಯೋಗದೊಂದಿಗೆ ಗ್ರಾಮಲೋಕ್ ಕಾರ್ಯಕ್ರಮವು ಜೂನ್ 30ರಂದು ಬೆಳ್ತಂಗಡಿ ಟಿವಿಎಸ್ ಶೋರೂಂನಲ್ಲಿ ಜರಗಿತು.ಕಾರ್ಯಕ್ರಮವನ್ನು ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ಧರ್ಮಗುರು ವಂ.ಫಾ.ವಾಲ್ಟರ್ ಡಿಮೆಲ್ಲೊ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ನಮ್ಮ ಕೊಂಕಣಿ ನಾಡು ಉಳಿಸುವ, ಕೊಂಕಣಿ ಭಾಷೆ ಉಳಿಸುವ ಯೋಜನೆ ಆಗಬೇಕು ಎಂದರು. ಕೊಂಕಣಿ ಸಾಹಿತ್ಯ ಉಳಿಸಲು ನಾವು ಪ್ರಯತ್ನ ಮಾಡಬೇಕು ಎಂದು ಕರೆ ಕೊಟ್ಟರು.
ವೇದಿಕೆಯಲ್ಲಿ ಕೇಂದ್ರ ಕೊಂಕಣಿ ಸಾಹಿತ್ಯ ಅಕಾಡೆಮಿ ಮೆಲ್ವಿನ್ ರೊಡ್ರಿಗಸ್, ಕೊಂಕಣಿ ಸಲಹಾ ಮಂಡಳಿ, ಸಾಹಿತ್ಯ ಅಕಾಡೆಮಿ ಸದಸ್ಯ ಹೆನ್ರಿ ಮೆಂಡೋನ್ಸ (ಎಚ್.ಎಂ. ಪೆರ್ನಾಲ್) ಭಾಗವಹಿಸಿದ್ದರು.ರೋಬರ್ಟ್ ಡಿ’ಸೋಜಾ ಮಡಂತ್ಯಾರು, ಕವಿತೆಗಳನ್ನು ವಿದ್ಯಾ ನಾಯಕ್ ಗುರುವಾಯನಕೆರೆ, ಮಕ್ಕಳ ಲಾಲನೆ ಪೋಷಣೆ ಗೀತೆಗಳು, ತೆಲ್ಮಾ ಮಾಡ್ತಾ ಮಡಂತ್ಯಾರು ಸ್ತ್ರಿ ಕವಿತೆಗಳನ್ನು, ಪ್ಲಾವಿಯಾ ಅಲ್ಬುಕರ್ಕ್ ಪುತ್ತೂರು ಚುಟುಕುಗಳನ್ನು, ಅಪೋಲಿನ್ ಮತ್ತು ಟೀಮ್ ಬೆಳ್ತಂಗಡಿ ಗಾಯನಗಳನ್ನು, ಹೆನ್ರಿ ಮೆಂಡೋನ್ಸಾ ಕಾದಂಬರಿಗಳನ್ನು ಪ್ರಸ್ತುತ ಪಡಿಸಿ ರಂಜಿಸಿದರು.
ಈ ನಿಟ್ಟಿನಲ್ಲಿ ಹಿರಿಯ ಸಾಹಿತಿ, ಲೇಖಕರು, ಕವಿಗಳು ಭಾಗವಹಿಸಿದ್ದರು.ಸ್ಟೇನಿ ಬೆಳ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರ್ ಮೊತಿಯಾಂ ಸಂಘಟನೆ ದುಬೈ ಗ್ರೋಪ್ ನ ಬೆಳ್ತಂಗಡಿ ಟಿ ವಿ ಎಸ್ ಲೋಬೊ ಮೋಟರ್ಸ್ ಮಾಲಕ ರೊನಾಲ್ಡ್ ಲೋಬೊ ವಂದಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಲ್ಯಾನ್ಸಿ ಪಿರೇರಾ, ಜೇಮ್ಸ್ ಡಿಸೋಜಾ, ವಲೇರಿಯನ್ ರೊಡ್ರಿಗಸ್, ವಿನ್ಸೆಂಟ್ ಡಿಸೋಜಾ, ಪೌಲಿನ್ ರೇಗೊ, ಅರ್ವಿನ್ ಡಿ’ಸೋಜಾ, ಕಥೊಲಿಕ್ ಸಭಾ ವಲಯ ಅಧ್ಯಕ್ಷ ಲಿಯೋ ರೊಡ್ರಿಗಸ್, ಸೆಲೆಸ್ತಿನ್ ಡಿಸೋಜಾ, ಅಶೋಕ್ ಮೋನಿಸ್, ಫ್ರಾನ್ಸಿಸ್ ಮಿರಾಂದ, ಪ್ಲಾವಿಯಾ ಪೌಲ್, ಜುಲಿಯಾನಾ ಡಿಸೋಜಾ, ವಿನಯ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.