Site icon Suddi Belthangady

ತಾಲೂಕು ಗಮಕ ಪರಿಷತ್ ವತಿಯಿಂದ ಮನೆ ಮನೆ ಗಮಕ

ಬೆಳ್ತಂಗಡಿ: ತಾಲೂಕು ಗಮಕ ಕಲಾ ಪರಿಷತ್ ವತಿಯಿಂದ ಮನೆ ಮನೆ ಗಮಕ ಕಾರ್ಯಕ್ರಮ ಅಭಿಯಾನದ 4ನೇ ಹೆಜ್ಜೆ ಧರ್ಮಸ್ಥಳದ ಗಿರೀಶ್ ಕುದ್ರೆಂತಾಯರ ಶಿವಪಾರ್ವತಿ ಕೃಪಾ ಮನೆಯಲ್ಲಿ ಧರ್ಮಸ್ಥಳ ತುಳು ಶಿವಳ್ಳಿ ಸಭಾದ ಸಹಯೋಗದೊಂದಿಗೆ ನಡೆಯಿತು.

ಜೈಮಿನಿ ಭಾರತದ ಕಾವ್ಯದಿಂದ ಆಯ್ದ ಉದ್ದಾಲಕನ ಕಥೆಯನ್ನು ವಾಚನ ವ್ಯಾಖ್ಯಾನ ಮಾಡಲಾಯಿತು.

ಹಿರಿಯ ಗಮಕಿಗಳಾದ ಗಮಕ ಕಲಾ ಪರಿಷತ್ತಿನ ಪೂರ್ವಾಧ್ಯಕ್ಷ ಜಯರಾಮ ಕುದ್ರೆತ್ತಾಯ ವಾಚನಗೈದರು.

ವ್ಯಾಖ್ಯಾನವನ್ನು ನಾಟಕೀಯ ಶೈಲಿಯಲ್ಲಿ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು, ತಾಳಮದ್ದಳೆ ಅರ್ಥಧಾರಿ ಸುರೇಶ್ ಕುದ್ರೆಂತಾಯರು ಮತ್ತು ಉಡುಪಿಯ ಸುಜಲಾ ನಾರಾಯಣ ಭಟ್ ನಡೆಸಿದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.

ಧರ್ಮಸ್ಥಳದ ತುಳು ಶಿವಳ್ಳಿ ಸಭಾ ಕಾರ್ಯದರ್ಶಿ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಪಡ್ಡೆಟ್ನಾಯ ವಂದಿಸಿದರು.

ಗಮಕ ಕಲಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಪ್ರೊ ಮಧೂರು ಮೋಹನ ಕಲ್ಲೂರಾಯ, ಕಲಾ ಪೋಷಕರಾದ ಬಿ. ಭುಜಬಲಿ, ತುಳು ಶಿವಳ್ಳಿ ಸಭಾದ ತಾಲೂಕು ಅಧ್ಯಕ್ಷ ಶl ರಾಘವೇಂದ್ರ ಬೈಪಾಡಿತ್ತಾಯ, ವಲಯಾಧ್ಯಕ್ಷ ಶ್ರೀಪತಿ ಅರ್ಬುಂಡತ್ತಾಯ, ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಮೇಧಾ, ಖಜಾಂಚಿ ಸುವರ್ಣಕುಮಾರಿ ಕಲ್ಲೂರಾಯ, ಶಿಕ್ಷಕ ಶ ಅಶೋಕ ಭಟ್, ಗಮಕಿ ಮನೋರಮಾ ತೋಳ್ಳಾಡಿತ್ತಾಯ, ಮತ್ತಿತರರು ಉಪಸ್ಥಿತರಿದ್ದರು.

Exit mobile version