ಪಿಲ್ಯ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವ ಯೋಗ ದಿನಾಚರಣೆಯ ಬಗ್ಗೆ ಶಾಲಾ ಸಂಚಾಲಕ ನಸೀರ್ ಅಹಮದ್ ಖಾನ್ ಮಾತನಾಡುತ್ತಾ ಯೋಗವು ಜೀವನದಲ್ಲಿ ಸಂತೋಷವನ್ನು ಸಾಧಿಸಲು ಯೋಗವು ಅತ್ಯುತ್ತಮ ಮಾರ್ಗವಾಗಿದೆ ಎಂದರು.
ಸಹ ಶಿಕ್ಷಕಿ ಶ್ರೀಮತಿ ಪ್ರಣೀತಾ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸುತ್ತಾ ಯೋಗ ಏಕೆ ಮಾಡಬೇಕು, ಯೋಗದ ಪ್ರಯೋಜನ ಮತ್ತು ಮಹತ್ವಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಎಲ್ ಕೆಜಿಯಿಂದ 10ನೇ ತರಗತಿಯ ತನಕ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಸಹ ಶಿಕ್ಷಕರುಗಳಾದ ಮೆಲ್ವಿನ್, ನಿಶ್ಮಿತಾ, ಸೌಜನ್ಯ ಯೋಗಾಭ್ಯಾಸ ಮಾಡಿಸಿದರು.