ಮಿತ್ತಬಾಗಿಲು: ಗ್ರಾಮದ ಕುಕ್ಕಾವು ಪರಿಸರದಲ್ಲಿ ಎರಡು ದಿನಗಳಿಂದ ನಾಲ್ಕು ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಅಪಾರ ಕೃಷಿಗೆ ಹಾನಿ ಉಂಟು ಮಾಡಿದೆ.ಆನೆಯನ್ನು ಕಂಡ ಸ್ಥಳೀಯರು ಭಯ ಬೀತಗೊಂಡು ಕುಕ್ಕಾವು ಪರಿಸರದ ಜನರು ಆನೆಬಂದ ಮಾಹಿತಿಗಾಗಿ ಮುನ್ನೆಚ್ಚರಿಕೆಗಾಗಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡು ತಮ್ಮ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕುಕ್ಕಾವು ಅಲಂಗಾರು ಸಂಜೀವ ನಾಯ್ಕ , ಅಮೈ ದೇವರಾಯರಾವ್, ಪಾದೆ ಚೆನ್ನಕ್ಕ ಹಾಗೂ ಅನೇಕ ಮನೆಗಳು ಕೃಷಿಗೆ ಹಾನಿ ಉಂಟು ಮಾಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.