Site icon Suddi Belthangady

ಉಜಿರೆ ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ಪತ್ತೆ- ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಉಜಿರೆ: ಆಟೋ ಚಾಲಕರಾಗಿದ್ದ ಮಾಚಾರು ನಿವಾಸಿ ಸುಧಾಕರ್ (35) ನಾಪತ್ತೆಯಾಗಿದ್ದು ಇಂದು (ಜೂ.29) ಬಜೆಗೋಳಿಯ ನೆಲ್ಲಿಕಾರ್ ಸಮೀಪದ ಕಾಡಿನಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಜೂ.28ರಂದು ಬೆಳಗ್ಗೆ ಆಟೋ ಹಿಡಿದುಕೊಂಡು ಮನೆಯಿಂದ ಹೊರಟವರು ಮತ್ತೆ ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಸದ್ಯ ಇವರ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Exit mobile version