ಬೆಳ್ತಂಗಡಿ: ಹಾಲಿನ ದರ ಏರಿಕೆ ಮತ್ತು ರೈತರಿಗೆ ಸರಕಾರದ ಪ್ರೋತ್ಸಾಹ ಧನ ಬಿಡುಗಡೆಗೊಳಿಸುವ ಬಗ್ಗೆ ಹಾಗೂ ರೈತರಿಗೆ ಹಾಲಿನ ದರ ಹೆಚ್ಚಳ ಮಾಡಲು ಜುಲೈ 02ರಂದು ಜಿಲ್ಲಾಮಟ್ಟದ ಬೃಹತ್ ಪ್ರತಿಭಟನೆ ಬೆಳ್ತಂಗಡಿ ಮಿನಿ ವಿಧಾನ ಸೌಧದ ಬಳಿ ನಡೆಯಲಿದೆ.
ಬೆಳ್ತಂಗಡಿ ರೈತ ಮೋರ್ಚಾ ಅಧ್ಯಕ್ಷ ವಿಜಯ ಗೌಡರವರ ನೇತೃತ್ವದಲ್ಲಿ ಹಾಲಿನ ದರ ಹೆಚ್ಚಳ ಖಂಡಿಸಿ ಮತ್ತು ರೈತರಿಗೆ ಸರಕಾರದ ಪ್ರೋತ್ಸಾಹ ಧನ ಬಿಡುಗಡೆಗೊಳಿಸುವ ಬಗ್ಗೆ ಹಾಗೂ ರೈತರಿಗೆ ಹಾಲಿನ ದರ ಏರಿಕೆ ಯಾಗುವ ಬಗ್ಗೆ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಜೂನ್ 29ರಂದು ಪಕ್ಷದ ಕಚೇರಿಯಲ್ಲಿ ವಿಶೇಷ ಬೈಠಕ್ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರು ಗಣೇಶ್ ಗೌಡ ನಾವೂರು ಮಾರ್ಗದರ್ಶನ ನೀಡಿದರು ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಹಾಗೂ ಬೆಳ್ತಂಗಡಿ ಮಂಡಲ ರೈತಮೋರ್ಚಾ ಅಧ್ಯಕ್ಷ ವಿಜಯ ಗೌಡ ವೇಣೂರು, ಪ್ರಧಾನ ಕಾರ್ಯದರ್ಶಿಗಳಾದ ಯೋಗೀಶ್ ಗೌಡ ಆಳಂಬಿಲ ಕೊಕ್ಕಡ, ದಿವಿನೇಶ್ ಚಾರ್ಮಾಡಿ ಹಾಗೂ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದರು.