Site icon Suddi Belthangady

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಭೂ ಸೇನೆಗೆ ಆಯ್ಕೆಯಾದ ಸುಳ್ಯದ ಸೃಜನ್ ಕೆ.ಆರ್

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ವಿದ್ಯಾಮಾತಾ ಅಕಾಡೆಮಿ ಇದರ ಸುಳ್ಯ ಶಾಖೆಯಲ್ಲಿ ಸೇನಾ ತರಬೇತಿ ಪಡೆದ ಸುಳ್ಯ ನಿವಾಸಿ ಸೃಜನ್ ಕೆ. ಆರ್.ರವರು ಅಗ್ನಿಪಥ್ ಮೂಲಕ ಭಾರತೀಯ ಭೂಸೇನೆಗೆ ಆಯ್ಕೆಗೊಂಡಿದ್ದಾರೆ.

ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕೊಡ್ದೋಳು ನಿವಾಸಿ ರಾಮಕೃಷ್ಣ ರೈ ಮತ್ತು ಗೀತಾ ದಂಪತಿಯ ಪುತ್ರ ಸೃಜನ್ ಕೆ.ಆರ್. ಜೂ.೨೯ ರಂದು ಕರ್ತವ್ಯಕ್ಕೆ ಅಸ್ಸಾಂಗೆ ತೆರಳಲಿದ್ದು , ಜು.೧ ರಂದು ಅಲ್ಲಿನ ಅರ್ಟಿಲ್ಲರಿ ರೆಜಿಮೆಂಟ್ ವಿಭಾಗದಲ್ಲಿ ಕರ್ತವ್ಯ ಆರಂಭಿಸಲಿದ್ದಾರೆ.

2023ರ ಫೆಬ್ರವರಿ ತಿಂಗಳಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು, ಮಂಗಳೂರಿನಲ್ಲಿ ನಡೆದ ಸೇನಾ ಪರೀಕ್ಷೆ ಎದುರಿಸಿ, ತೇರ್ಗಡೆ ಹೊಂದಿ, ಮಹಾರಾಷ್ಟ್ರದ ನಾಸಿಕ್‌ನಲ್ಲಿ 32 ವಾರಗಳ ಸೇನಾ ತರಬೇತಿ ಪೂರ್ಣಗೊಳಿಸಿದ್ದರು.

ಸೃಜನ್ ರವರು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಎಣ್ಮೂರು ಪ್ರೌಢಶಾಲೆಯಲ್ಲಿ, ಪಿ.ಯು ಶಿಕ್ಷಣವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪೂರೈಸಿ, ನಂತರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ
ವರ್ಷದ ಡಿಪ್ಲೊಮಾ ಪದವಿ ಮುಗಿಸಿದ್ದರು.ನಂತರ ಸುಳ್ಯದ ವಿದ್ಯಾಮಾತಾ ಅಕಾಡೆಮಿ ತರಬೇತಿ ಕೇಂದ್ರದಲ್ಲಿ ಸೇನಾ ಪರೀಕ್ಷಾ ತರಬೇತಿಯನ್ನು ಪಡೆದುಕೊಂಡು ಇದೀಗ ಭೂ ಸೇನೆಗೆ ಆಯ್ಕೆಗೊಂಡಿದ್ದಾರೆ.

ವಿದ್ಯಾಮಾತಾ ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈರವರು ಇವರ ಸಾಧನೆಯನ್ನು ಮೆಚ್ಚಿ, ಸೇನೆಗೆ ಆಯ್ಕೆಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.

Exit mobile version