Site icon Suddi Belthangady

ವಾಣಿ ಕಾಲೇಜಿನಲ್ಲಿ ನಿಹಾರ್ ಎಸ್.ಆರ್‌ಗೆ ಅಭಿನಂದನೆ

ಬೆಳ್ತಂಗಡಿ: ನೀಟ್‌ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 690 ಅಂಕಗಳನ್ನು ಗಳಿಸಿದ ಮತ್ತು ಸಿಇಟಿ ಪರೀಕ್ಷೆಯಲ್ಲಿ ಒಟ್ಟು ಏಳು ಬ್ಯಾಂಕ್ ಗಳಿಸಿದ ನಿಹಾರ್ ಎಸ್.ಆರ್. ವಾಣಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನಿಡಿದರು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ತಾವು ನಡೆಸಿದ ತಯಾರಿಯ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಪ್ರತಿಭಾನ್ವಿತ ವಿದ್ಯಾರ್ಥಿ ನಿಹಾರ್ ಎಸ್‌.ಆ‌ರ್. ಅವರನ್ನು ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಾಥ್ ಕೆ.ಎಂ, ಪ್ರಾಂಶುಪಾಲರು ಯದುಪತಿ ಗೌಡ, ಉಪಪ್ರಾಂಶುಪಾಲ ವಿಷ್ಣುಪ್ರಕಾಶ್‌ ಎಂ ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು.

Exit mobile version