Site icon Suddi Belthangady

ಬಂದಾರುವಿನಲ್ಲಿ ಮನೆಯ ಮೇಲೆ ಧರೆ ಕುಸಿದು ಬಿದ್ದು ಹಾನಿ

ಬಂದಾರು: ಬಂದಾರು ಗೋಡಾನ್ ಬಳಿಯ ಹುಕ್ರಪ್ಪ ರವರ ಮನೆಯ ಮೇಲೆ ಧರೆ ಕುಸಿದು ಬಿದ್ದು ಸಾವಿರಾರು ರೂಪಾಯಿಗಳ ನಷ್ಟ ಸಂಭವಿಸಿದ ಘಟನೆ ಜೂನ್ 27ರಂದು ನಡೆದಿದೆ.ಮನೆ ಸಂಪೂರ್ಣ ಬಿರುಕು ಬಿಟ್ಟಿದೆ. ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗ್ಗಿನಿಂದ ಹಿಟಾಚಿ ಮೂಲಕ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದೆ.ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version