Site icon Suddi Belthangady

ತೆಕ್ಕಾರು: ಧಾರಕಾರ ಮಳೆಗೆ ಮನೆ ಹಾನಿ

ತೆಕ್ಕಾರು: ತೆಕ್ಕಾರು ಗ್ರಾಮದ ಬೊಳಲುಗುಡ್ಡೆ ಅತಿಜಮ್ಮರವರ ಮನೆಯ ಮಹಡಿ ಧಾರಕಾರ ಮಳೆಗೆ ಹಾನಿ ಉಂಟಾಗಿದೆ.

ಮಳೆಯ ನೀರು ಮನೆಯೊಳಗಡೆ ಸೊರುತ್ತಿದ್ದು ನಿಲ್ಲಲು ಅಸಾಧ್ಯವಾಗಿದೆ. ಘಟನಾ ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷೆ ರಹಿಯಾನತ್, ಗ್ರಾಮ ಲೆಕ್ಕಾಧಿಕಾರಿ ಸಾಕಮ್ಮ, ತೆಕ್ಕಾರು ಪ್ಯಾಕ್ಸ್ ಅಧ್ಯಕ್ಷ ಅಬ್ದುಲ್ ರಜಾಕ್, ಗ್ರಾ.ಪಂ ಸದಸ್ಯರುಗಳಾದ ಹಕೀಂ ಹಾಗೂ ಬಿಎಸ್ ಎ.ಹಾರಿಸ್ ಭೇಟಿ ನೀಡಿದರು.

ಇದೀಗ ಮನೆಗೆ ತಾತ್ಕಾಲಿಕವಾಗಿ ಟರ್ಪಾಲ್ ಹಾಕಲಾಗಿದೆ.

Exit mobile version