Site icon Suddi Belthangady

ಅರಸಿನಮಕ್ಕಿ: ಪ್ರೌಢ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

ಅರಸಿನಮಕ್ಕಿ: ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಮಾಹಿತಿ ಕಾರ್ಯಾಗಾರವನ್ನು ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಹೆಚ್.ಎಸ್.ಚೆನ್ನಪ್ಪ ಗೌಡರವರು ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ನಿವೃತ ಮುಖ್ಯ ಶಿಕ್ಷಕ ಗಣೇಶ್ ಐತಲರವರು ಮಾಹಿತಿ ನೀಡುತ್ತಾ ಹವ್ಯಾಸ ಮತ್ತು ವ್ಯಸನಕ್ಕೆ ಇರುವ ವ್ಯತ್ಯಾಸಗಳ ಬಗ್ಗೆ ಹಾಗೂ ಮಾದಕ ವಸ್ತುಗಳ ವ್ಯಸನಾ ಹೇಗೆ ಪ್ರಾರಂಭವಾಗುವುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯೆ ಮಂಜುಳಾ ಕಾರಂತ್ ಉಪಸ್ಥಿತರಿದ್ದು ಶುಭಹಾರೈಸಿದರು.

ಶಾಲಾ ಮುಖ್ಯ ಶಿಕ್ಷಕ ಚಂದ್ರು ಸೇವಾಪ್ರತಿನಿಧಿ ಯಮುನಾರವರು ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಮಾಲತಿ ಸ್ವಾಗತಿಸಿ, ಮೇಲ್ವಿಚಾರಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಚೇತನಾ ಧನ್ಯವಾದ ನೀಡಿದರು.

ಈ ಸಂದರ್ಭದಲ್ಲಿ “ಬದುಕು ಕಟ್ಟಿದ ಬಗೆಗಳು” ಪುಸ್ತಕವನ್ನು ಜನಜಾಗೃತಿ ವೇದಿಕೆಯ ಸದಸ್ಯರು ಮುಖ್ಯ ಶಿಕ್ಷಕರಿಗೆ ನೀಡಿದರು.

Exit mobile version