Site icon Suddi Belthangady

ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ನಾಯಕ-ನಾಯಕಿ ಆಯ್ಕೆ ಹಾಗೂ ವಿದ್ಯಾರ್ಥಿ ಮಂತ್ರಿಮಂಡಲ ರಚನೆಯು ಚುನಾವಣೆ ಪ್ರಕ್ರಿಯೆ ಮೂಲಕ ನಡೆಯಿತು.

ಚುನಾವಣೆ ಬಳಿಕ ಶಾಲಾ ನಾಯಕನಾಗಿ ಪ್ರಮಿತ್ 10ನೇ ತರಗತಿ ಆಯ್ಕೆಗೊಂಡರು.ಶಾಲಾ ಉಪನಾಯಕಿಯಾಗಿ ಹುನೈದ 9ನೇ ತರಗತಿ ಆಯ್ಕೆಗೊಂಡರು.ಕ್ರೀಡಾ ಇಲಾಖೆ ಸಚಿವರಾಗಿ ಪ್ರತೀಕ್ 10ನೇ ತರಗತಿ, ಆರೋಗ್ಯ ಇಲಾಖೆ ಸಚಿವರಾಗಿ ಪ್ರೀತಂ 10ನೇ ತರಗತಿ, ಸಾಂಸ್ಕೃತಿಕ ಇಲಾಖೆ ಸಚಿವರಾಗಿ ಹೇಮಂತ್ 10ನೇ ತರಗತಿ, ಶಿಕ್ಷಣ ಇಲಾಖೆ ಸಚಿವರಾಗಿ ಯಶ್ವಿನ್ 10ನೇ ತರಗತಿ ಆಯ್ಕೆಗೊಂಡರು.ಜೊತೆಗೆ ವಿರೋಧ ಪಕ್ಷದ ನಾಯಕರಾಗಿ ಸಹನ 9ನೇ ತರಗತಿ ಆಯ್ಕೆಗೊಂಡರು.ಸಭಾಪತಿಗಳಾಗಿ ನಿಧಿ 9ನೇ ತರಗತಿ ಆಯ್ಕೆಗೊಂಡರು.

ಈ ಎಲ್ಲಾ ಆಯ್ಕೆ ಪ್ರಕ್ರಿಯೆಗಳನ್ನು ಶಾಲಾ ಮುಖ್ಯ ಶಿಕ್ಷಕಿ ಹಾಗು ಶಿಕ್ಷಕ ವೃಂದದವರ ನೇತೃತ್ವದಲ್ಲಿ ನಡೆಸಲಾಯಿತು.

Exit mobile version