Site icon Suddi Belthangady

ಉಜಿರೆ: ಟಿ.ಬಿ ಕ್ರಾಸ್ ಬಳಿ ಟಿಟಿ ವಾಹನ ಬೆಂಕಿಗಾಹುತಿ

ಬೆಳ್ತಂಗಡಿ: ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದ ಟಿಟಿ ವಾಹನಕ್ಕೆ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಗೊಂಡು ಬೆಂಕಿಗಾಹುತಿಯಾದ ಘಟನೆ ಟಿ.ಬಿ.ಕ್ರಾಸ್ ನಲ್ಲಿ ಉಜಿರೆ ಟಿ.ಬಿ.ಕ್ರಾಸ್ ನಲ್ಲಿ ಜೂ.26ರಂದು ರಾತ್ರಿ ಸುಮಾರು 12 ಗಂಟೆಗೆ ನಡೆದಿದೆ.

ಖಾಸಗಿ ಸೂಪರ್ ಮಾರ್ಕೆಟ್ ಗೆ ಸೇರಿದ ಟಿಟಿ ವಾಹನವನ್ನು ಅದರ ಚಾಲಕ ರಸ್ತೆ ಬದಿ ನಿಲ್ಲಿಸಿ ಹೋಗಿದ್ದು. ಈ ವೇಳೆ ಟಿಟಿ ವಾಹನಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ವಾಹನ ಬೆಂಕಿಗಾಹುತಿಯಾಗಿದೆ.

ಟಿಟಿ ಬೆಂಕಿಗಾಹುತಿಯಾಗುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

Exit mobile version