Site icon Suddi Belthangady

ಉಜಿರೆ: ಟಿ.ಬಿ ಕ್ರಾಸ್ ಬಳಿ ರಸ್ತೆಗೆ ಬಿದ್ದ ಬೃಹತ್ ಆಕಾರದ ಮರ- ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಉಜಿರೆ: ಟಿ.ಬಿ ಕ್ರಾಸ್ ಬಳಿ ಮುಖ್ಯ ರಸ್ತೆಗೆ ಬೃಹತ್ ಆಕಾರದ ಮರ ಬಿದ್ದ ಘಟನೆ ಜೂ.26ರಂದು ನಡೆದಿದೆ.

ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಬದಿಯಲ್ಲಿ ಇರುವ ಅಪಾಯಕಾರಿ ಮರಗಳು ರಸ್ತೆಗೆ ಬಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಇಂತಹ ಅನೇಕ ಮರಗಳು ಆ ಪರಿಸರದಲ್ಲಿ ಇದ್ದು ಇದನ್ನು ತೆರವುಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Exit mobile version