Site icon Suddi Belthangady

ಸುದ್ದಿ ವರದಿ ಫಲಶೃತಿ: ಉಜಿರೆಯ ಅಪಾಯಕಾರಿ ಮರಗಳ ತೆರವು ಕಾರ್ಯ ಆರಂಭ

ಉಜಿರೆ: ಉಜಿರೆಯ ಮರಬಿದ್ದ ಅವಘಡದ ನಂತರ ಮತ್ತೆಷ್ಟು ಅಪಾಯಕಾರಿ ಮರಗಳಿದ್ದಾವೆ ಅನ್ನುವುದರ ಬಗ್ಗೆ ಸುದ್ದಿ ನ್ಯೂಸ್ ಬೆಳ್ತಂಗಡಿ ಯೂ ಟ್ಯೂಬ್ ಚಾನೆಲ್ ನಲ್ಲಿ ಜೂ.25ರಂದು ವಿಸ್ತೃತ ವರದಿ ಮಾಡಿತ್ತು.

ಉಜಿರೆಯ ಪೇಟೆಯಿಂದ ಬೆಳ್ತಂಗಡಿ ಬರುವ ಮಾರ್ಗದಲ್ಲಿ ಈಗಾಗ್ಲೇ ಹೆದ್ದಾರಿ ಇಲಾಖೆಯವರು ಗುರುತು ಹಾಕಿರುವ ಕೆಲ ಮರಗಳು ಅಪಾಯಕಾರಿಯಾಗಿ ರಸ್ತೆಗೆ ಬಾಗಿಕೊಂಡು ಇದ್ದಾವೆ. ಇವುಗಳನ್ನು ಕೂಡಲೇ ತೆರವುಗೊಳಿಸಬೇಕು, ಇಲ್ಲವೇ, ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸುದ್ದಿ ನ್ಯೂಸ್ ವರದಿ ಮಾಡಿದ ಬೆನ್ನಲ್ಲೇ ಜೂ.26ರಂದು ಗ್ರಾಮಪಂಚಾಯತ್ ಉಜಿರೆ, ಅರಣ್ಯ ಇಲಾಖೆ, ಹೆದ್ದಾರಿ ಇಲಾಖೆಯ ಸಹಭಾಗಿತ್ವದ ಹಲವು ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಅಪಾಯಕಾರಿಯಾಗಿ ರಸ್ತೆಗೆ ಬಾಗಿಕೊಂಡಿದ್ದ ಮರಗಳನ್ನು ತೆರವು ಮಾಡುವ ಕಾರ್ಯದಲ್ಲಿ ಇಂಡಿಯನ್ ಬೇಕರಿ ಮುಂಭಾಗದಲ್ಲಿದ್ದ ಮಾವಿನ ಮರವನ್ನು ತೆರವುಗೊಳಿಸಲಾಗಿದೆ.ಇನ್ನುಳಿದಂತೆ, ಇತರೆ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.

Exit mobile version