Site icon Suddi Belthangady

ಮಾಯ ಶಾಲೆಗೆ ಶಿವ ಮಾಣಿಕ್ಯ ತಂಡದ ವತಿಯಿಂದ ಕೊಡುಗೆ

ಬೆಳಾಲು: ತಾಲೂಕಿನ ಸಾಮೂಹಿಕ ನಾಯಕತ್ವದ ಶಿವ ಮಾಣಿಕ್ಯ ತಂಡದ ಸದಸ್ಯರಾದ ಶಶಿಧರ ಆಚಾರ್ಯ, ರಾಧಾಕೃಷ್ಣ ಗೌಡ ಮಾಯ, ಪ್ರವೀಣ್ ಪಿಲತ್ತಡಿ, ರಾಘವೇಂದ್ರ, ಹರೀಶ್, ಶಾಮರಾಯ ಬೆಳಾಲು ಇವರು ಜೂ. 25ರಂದು ಮಾಯ ಶಾಲೆಗೆ ಭೇಟಿ ನೀಡಿ ಸುಮಾರು 15,000 ರೂ ಮೌಲ್ಯದ ಪೀಠೋಪಕರಣ (ಚೇರ್, ರಾಕ್) ಹಾಗೂ ಮೌಲ್ಯಾಧಾರಿತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಶಿವ ಮಾಣಿಕ್ಯ ತಂಡದ ಸದಸ್ಯರಾದ ರಾಧಾಕೃಷ್ಣ ಗೌಡ ಮಾತನಾಡಿ ನಮ್ಮ ತಂಡದ ಮೂರನೇ ವರ್ಷದ ಸಂಸ್ಥಾಪನೆಯ ಸವಿ ನೆನಪಿಗಾಗಿ ಈ ಬಾರಿ ಶೈಕ್ಷಣಿಕ ಕ್ಷೇತ್ರದ ಸುಧಾರಣೆಯ ಕಡೆ ಗಮನ ಹರಿಸಿದ್ದು, ಅದರಡಿಯಲ್ಲಿ ಮಾಯ ಶಾಲೆಗೆ ಅಗತ್ಯವಾದ ಪೀಠೋಪಕರಣ ಹಾಗೂ ಮೌಲ್ಯಾಧಾರಿತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದರು.

ಪೀಠೋಪಕರಣ ಹಾಗೂ ಪುಸ್ತಕಗಳನ್ನು ಸ್ವೀಕರಿಸಿದ ಮುಖ್ಯ ಶಿಕ್ಷಕ ವಿಠಲ ಎಂ., ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಭವಾನಿ ಮಾತನಾಡಿ ಶಿವ ಮಾಣಿಕ್ಯ ತಂಡದ ಸರ್ವ ಸದಸ್ಯರ ಕಾರ್ಯಗಳನ್ನು ಶ್ಲಾಘಿಸಿ, ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version