ಬೆಳ್ತಂಗಡಿ: ಗುರುವಾಯನಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಬಳಂಜ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಪರಿಸರ ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು.ಪ್ರಥಮವಾಗಿ ಗಿಡ ನೆಡುವ ಮೂಲಕ ಪ್ರಮೋದ್ ಕುಮಾರ್ ಜೈನ್ ರವರು ಕಾರ್ಯಕ್ರಮ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಮೇಲ್ವಿಚಾರಕ ಕೃಷ್ಣ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಮಕ್ಕಳಿಗೆ ಹುಟ್ಟುಹಬ್ಬ ಆಚರಣೆ ದಿನ ಗಿಡ ನೆಡುವ ಮೂಲಕ ಆಚರಿಸಿದರೆ ಉತ್ತಮ ಹಾಗೂ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಸೇವಾ ಪ್ರತಿನಿಧಿ ಪ್ರಮೀಳಾ ಪಿ ಆಚಾರ್ಯ ಸ್ವಾಗತಿಸಿ, ಈ ಕಾರ್ಯಕ್ರಮದಲ್ಲಿ ಅಳದಂಗಡಿ ವಲಯದ ಮಾಜಿ ಜನ ಜಾಗೃತಿ ಅಧ್ಯಕ್ಷ ಪ್ರಮೋದ್ ಕುಮಾರ್ ಜೈನ್, ವಲಯ ಮೇಲ್ವಿಚಾರಕ ಗಣೇಶ್, ಕಿರಿಯ ಹಾಗೂ ಹಿರಿಯ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಸೇವಾ ಪ್ರತಿನಿಧಿ ಪ್ರಮೀಳಾ, ಎಸ್ ಡಿ ಎಂ ಅಧ್ಯಕ್ಷ ರತ್ನಾಕರ ಪೂಜಾರಿ, ಬಳಂಜ ಬಿ ಒಕ್ಕೂಟದ ಪದಾಧಿಕಾರಿ ನಿತ್ಯಾನಂದ ಹೆಗ್ಡೆ, ಶೌರ್ಯ ವಿಪತ್ತು ಘಟಕದ ಸಂತೋಷ್ ಭಂಡಾರಿ ಹಾಗೂ ಬೇಬಿ, ಜೆಸಿಐ ಮಂಜುಶ್ರೀ ಬೆಳ್ತಂಗಡಿ ಇದರ ಅಧ್ಯಕ್ಷ ಹೆಚ್ ಡಿ ರಂಜಿತ್, ಪಂಚಾಯತ್ ಸದಸ್ಯೆ ಯಕ್ಷಿತಾ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.