ಬಳಂಜ: ಮಳೆಗಾಲದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯ ಆಗವುದು ಸಾಮಾನ್ಯ ಆದರೆ ಬಳಂಜ ಗ್ರಾ.ಪಂ.ವ್ಯಾಪ್ತಿಯ ನಾಲ್ಕೂರು ಗ್ರಾಮದಲ್ಲಿ ಸಣ್ಣ ಮಟ್ಟದಲ್ಲಿ ಗಾಳಿ ಮಳೆ ಸುರಿದರೆ ಆ ಭಾಗದ ಜನತೆಗೆ ಅಂದು ಕರೆಂಟ್ ಇಲ್ಲ. ಕೃಷಿ ಹೈನುಗಾರಿಕೆ ಚಟುವಟಿಕೆಯನ್ನು ಆಧಾರಿಸಿದ ಈ ಭಾಗದ ಜನತೆಯ ಮೂಲ ಕಸುಬು ಆಗಿದೆ. ಆದರೆ ವಿದ್ಯುತ್ ಸರಬರಾಜು ಸಮರ್ಪಕವಾಗಿ ನಡೆಯದಿರುವ ಕಾರಣ ವ್ಯವಸಹಾಯ ನಡೆಸಲು ಅಡಚಡಣೆ ಆಗುತ್ತಿದೆ. ಕರೆಂಟ್‌ನ ಕಣ್ಣಮುಚ್ಚಾಲೆ ಆಟದಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಮೆಸ್ಕಾಂ ಇಲಾಖೆ ನಾಗರೀಕರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
20 ವರ್ಷ ಹಳೆಯದಾದ ವಿದ್ಯುತ್ ತಂತಿಗಳನ್ನು ಸರಿತೂಗಿಸಬೇಕು. ನಾಲ್ಕೂರು ಪರಿಸರದಲ್ಲಿ ಎಚ್ ಟಿ. ಮತ್ತು ಎಲ್ ಟಿ ಲೈನ್ ಹಾದು ಹೋಗುವ ಸ್ಥಳಗಳಲ್ಲಿ ಮರಗಳ ಕೊಂಬೆಯನ್ನು ಕತ್ತರಿಸಬೇಕು ಎಂದು ಸ್ಥಳೀಯ ಕರುಣಾಕರ್ ಹೆಗ್ಡೆ ಗ್ರಾಮಸ್ಥರ ಪರವಾಗಿ ಒತ್ತಾಯಿಸಿದ್ದಾರೆ. ಟ್ರೀ ಕಟ್ಟಿಂಗ್ ನಡೆಸಲಾಗುತ್ತಿದ್ದು, ಕೆಲವು ದಿನಗಳಲ್ಲಿ ಪೂರ್ತಿಗೊಳ್ಳಾಲಿದೆ. ಆಗ ಈ ಸಮಸ್ಯೆ ಬಗೆಹರಿಯುತ್ತದೆ. ಆ ಭಾಗದ ಸಂಬಧಪಟ್ಟ ಅಧಿಕಾರಿಗಳಿಗೆ ತಿಳಿಸುವುದಾಗಿ ಬೆಳ್ತಂಗಡಿ ಮೆಸ್ಕಾಂ ಇಲಾಖೆಯ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್ ಸುದ್ದಿ ಬಿಡುಗಡೆ ತಿಳಿಸಿದ್ದಾರೆ.