ಉಜಿರೆ: ಜೂ 22ರಿಂದ 24ರ ವರೆಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಆದಿತ್ಯ ಕಾಲೇಜ್ ಆಫ್ ಫಾರ್ಮಸಿ ಬೆಂಗಳೂರು ನಡೆಸಿದ ರಾಜ್ಯಮಟ್ಟದ ಮಹಿಳಾ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಉಜಿರೆಯ ಎಸ್.ಡಿ ಎಮ್ ನ್ಯಾಚುರೋಪತಿ ಕಾಲೇಜು ತಂಡವು ಚಾಂಪಿಯನ್ ಆಗಿರುತ್ತದೆ.
ಸೆಮಿಫೈನಲ್ ಪಂದ್ಯಾಟದಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜ್ ತಂಡವನ್ನು 3-0 ಅಂಕಗಳಿಂದ ಮಣಿಸಿ ಫೈನಲ್ ಪಂದ್ಯಾಟದಲ್ಲಿ ಕೆವಿಜಿ ಡೆಂಟಲ್ ಕಾಲೇಜ್ ಸುಳ್ಯ ತಂಡವನ್ನು 3-0 ಅಂಕಗಳಿಂದ ಸೋಲಿಸಿ ಚಾಂಪಿಯನ್ ಆಗಿ ಮೂಡಿಬಂದಿತು.
ಈ ತಂಡದಲ್ಲಿ ಕಾಲೇಜಿನ ಈಶಾನಿ, ಸಚೀಶಾ ಹಾಗೂ ಮೇದಿನಿ ಆಟವಾಡಿರುತ್ತಾರೆ. ಇವರಿಗೆ ಕಾಲೇಜಿನ ದೈಹಿಕ ನಿರ್ದೇಶಕ ಧರ್ಮೇಂದ್ರ ಕುಮಾರ್ ಮಾರ್ಗದರ್ಶನ ನೀಡಿರುತ್ತಾರೆ.