ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದ ಪಾಲಕರ ಹಬ್ಬವನ್ನು ಜೂನ್ 23ರಂದು ಹಬ್ಬದ ಪವಿತ್ರ ಬಲಿಪೂಜೆ ಅರ್ಪಿಸುವುದರೊಂದಿಗೆ ಸಂತರಿಗೆ ಗೌರವವನ್ನು ಸಲ್ಲಿಸಲಾಯಿತು.
ಪ್ರಧಾನ ಯಾಜಕರಾಗಿ ಮಂಗಳೂರು ಧರ್ಮಪ್ರಾಂತ್ಯದ ಖಜಾಂಜಿ ವಂ.ಜಗದೀಶ್ ಲೂಯಿಸ್ ಪಿಂಟೋರವರು ಹಾಗೂ ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮಗುರು ವಂ.ಗ್ರೇಶನ್ ಅಲ್ವಾರಿಸ್, ವಂ.ಅಶೋಕ್ ಡಿ’ಸೋಜ ಎಸ್.ವಿ.ಡಿ, ದೇವಾಲಯದ ಧರ್ಮಗುರು ವಂ.ಅನಿಲ್ ಪ್ರಕಾಶ್ ಡಿಸಿಲ್ವಾರವರು ಸಹ ಯಾಜಕರಾಗಿ ಬಲಿಪೂಜೆಯನ್ನು ಅರ್ಪಿಸಿದರು.
ಸಂತರ ಅನುಗ್ರಹದಿಂದ ದೊರೆತ ವಿವಿಧ ಉಪಕಾರಗಳನ್ನು ಸ್ಮರಿಸಿ ಭಕ್ತಾದಿಗಳು ಕಾಣಿಕೆಗಳನ್ನು ನೀಡಿದರು. ದೇಣಿಗೆ ನೀಡಿದ ಭಕ್ತಾದಿಗಳಿಗೆ ಮೊಂಬತ್ತಿ ನೀಡಿ ಗೌರವಿಸಲಾಯಿತು.
ಚರ್ಚ್‌ನ ಧರ್ಮಗುರು ವಂ.ಅನಿಲ್ ಪ್ರಕಾಶ್ ಡಿಸಿಲ್ವಾರವರು ಸರ್ವರಿಗೂ ವಂದಿಸಿ, ಹಬ್ಬದ ಶುಭಾಶಯವನ್ನು ಕೋರಿದರು.ಹಬ್ಬದ ಸಂಭ್ರಮವು ಭೋಜನದೊಂದಿಗೆ ಕೊನೆಗೊಂಡಿತು.
ಭೋಜನ ವ್ಯವಸ್ಥೆಗೆ ದೇವಾಲಯದ ಸಂಘಟನೆಗಳಾದ ಕಥೋಲಿಕ್ ಸಭಾ, ಸ್ತ್ರಿ ಸಂಘಟನೆ ಹಾಗೂ ಐಸಿವೈಎಂ ಸದಸ್ಯರು ಸಹಕರಿಸಿದರು.