Site icon Suddi Belthangady

ಪದ್ಮುಂಜ: ನನ್ಯ ಮನೆ ನಿವಾಸಿ ಅಬೂಬಕ್ಕರ್ ಹಾಜಿ ನಿಧನ

ಪದ್ಮುಂಜ: ಪದ್ಮುಂಜ ಇಲ್ಲಿಯ ಹಿರಿಯ ವ್ಯಕ್ತಿ, ನನ್ಯ ಮನೆ ನಿವಾಸಿ ಅಬೂಬಕ್ಕರ್ ಹಾಜಿ(85ವ) ರವರು ಜೂನ್ 24ರಂದು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.

ಇವರಿಗೆ ಮಧ್ಯರಾತ್ರಿಯಲ್ಲಿ ಎದೆ ನೋವು ಕಾಣಿಸಿಕೊಂಡ ಕಾರಣ ಕೂಡಲೇ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು.

ಮೃತರು ಪತ್ನಿ, ಮೂವರು ಪುತ್ರರಾದ ಬೆಳ್ತಂಗಡಿಯ ಪ್ರತಿಷ್ಠಿತ ಒಣ ಮೀನು ವ್ಯಾಪಾರಿ ಮುಹಮ್ಮದ್ ಮತ್ತು ರಫೀಕ್, ಅಬ್ದುಸ್ಸಮದ್, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂದು-ಬಳಗವನ್ನು ಅಗಲಿದ್ದಾರೆ.

Exit mobile version